ಥಾಣೆ: ಜನಪ್ರಿಯ ಹಿಂದಿ ಕಿರುತೆರೆ ನಟ ಪುನಿತ್ ತಲ್ರೇಜಾ(Punit Talreja) ಅವರ ಮೇಲೆ ಇಬ್ಬರು ವ್ಯಕ್ತಿಗಳು ಥಳಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಘಟನೆ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
34 ವರ್ಷದ ತಲ್ರೇಜಾ ಭಾನುವಾರ ತಮ್ಮ ತಾಯಿಗೆ ಔಷಧಿಗಳನ್ನು ಖರೀದಿಸಿ ತಮ್ಮ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದಾಗ ಅಂಬರನಾಥ್ ಟೌನ್ಶಿಪ್ನಲ್ಲಿ ಈ ಘಟನೆ ನಡೆದೆ.
ತಲ್ರೇಜಾ ಹೋಗುತ್ತಿದ್ದ ಬೈಕ್ ಹಿಂದೆ ಮತ್ತೊಂದು ಸ್ಕೂಟರ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಾರ್ನ್ ಮಾಡಿದ್ದಾರೆ. ಈ ವೇಳೆ ತಲ್ರೇಜಾ ಮುಂದೆ ಬಂದ ಆರೋಪಿಗಳು ದಾರಿ ನಿಡದಿದ್ದಕ್ಕಾಗಿ ನಿಂದಿಸಿ ಕಬ್ಬಿಣದ ರಾಡ್ ಮತ್ತು ಇತರ ಆಯುಧಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಂಬರನಾಥ್ನ ಶಿವಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ನಟನ ದೂರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ತಲ್ರೇಜಾಗೆ ತೀವ್ರ ಗಾಯಗಗೊಂಡಿದ್ದನ್ನು ಕಂಡ ಕೆಲವು ದಾರಿಹೋಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ತಲ್ರೇಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
BIG BREAKING NEWS: ಮುರುಘಾ ಶ್ರೀಗೆ ಮತ್ತೊಂದು ‘ಬಿಗ್ ಶಾಕ್’: ‘ಅಟ್ರಾಸಿಟಿ’ ಪ್ರಕರಣ ದಾಖಲು
BIGG NEWS : ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ : ಇಂದು ಮಹಾಮಳೆಗೆ ನಾಲ್ವರು ಬಲಿ