ಚೆನ್ನೈ: ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್(Prathap Pothen) ಅವರು ಇಂದು ಚೆನ್ನೈನ ಕಿಲ್ಪಾಕ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಟನಿಗೆ 70 ವರ್ಷ ವಯಸ್ಸಾಗಿತ್ತು. ಪ್ರತಾಪ್ ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವಿಗೂ ಕೆಲವೇ ಗಂಟೆಗಳ ಮೊದಲು ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಅವರು ಫೇಸ್ಬುಕ್ನಲ್ಲಿ ಇತ್ತೀಚಿನ ಕೆಲವು ಪೋಸ್ಟ್ಗಳಲ್ಲಿ ಸಾವಿನ ಬಗ್ಗೆ ಮಾತನಾಡಿದ್ದಾರೆ.
ವರದಿಯ ಪ್ರಕಾರ, ಪ್ರತಾಪ್ ಪೋಥನ್ ಅವರು 44 ವರ್ಷಗಳ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 100 ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅವರ ಕೆಲವು ಪ್ರಮುಖ ಪಾತ್ರಗಳು ’22 ಫೀಮೇಲ್ ಕೊಟ್ಟಾಯಂ’, ‘ಉಯರೆ’, ‘ಬೆಂಗಳೂರು ಡೇಸ್’, ‘ವರುಮೈಯಿನ್ ನಿರಂ ಸಿವಪ್ಪು’, ‘ಪನ್ನರ್ ಪುಷ್ಪಂಗಳು’ ಸೇರಿದಂತೆ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿವೆ.