ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಯಾತ್ರೆಯಲ್ಲಿ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಕೂಡ ಭಾಗಿಯಾಗಿದ್ದಾರೆ.
ಜೈರಾಮ್ ರಮೇಶ್, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೇವಾಲಾ ಸೇರಿದಂತೆ ಹಲವು ಪಕ್ಷದ ನಾಯಕರು ರಾಹುಲ್ ಗಾಂಧಿಯ ಜೊತೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ರಾಹುಲ್ ಜೊತೆಗೂಡಿದರು. ಸೋನಿಯಾ ಗಾಂಧಿ ಅವರು ಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಅಕ್ಟೋಬರ್ನಲ್ಲಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ನ ಮೆಗಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
Actor Kamal Hassan joins 'Bharat Jodo Yatra' as it marches ahead in the national capital Delhi. pic.twitter.com/ZZ02uwyCDa
— ANI (@ANI) December 24, 2022
ಇಂದು ಮುಂಜಾನೆ ಭಾರತ್ ಜೋಡೋ ಯಾತ್ರೆಯು ಫರಿದಾಬಾದ್ನಿಂದ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಿತು. ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ರಾಹುಲ್ ಹಾಗೂ ಇತರ ಪಕ್ಷದ ನಾಯಕರು ಸ್ವಾಗತಿಸಿದರು.
ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದ್ವೇಷದ ಮಾರುಕಟ್ಟೆ ನಡುವೆ ಪ್ರೀತಿಯ ಅಂಗಡಿ ತೆರೆಯುವುದು ತಮ್ಮ ಯಾತ್ರೆಯ ಉದ್ದೇಶವಾಗಿದೆ ಎಂದು ಪುನರುಚ್ಚರಿಸಿದರು.
ದೇಶದ ಜನಸಾಮಾನ್ಯರು ಈಗ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದಾರೆ. ನಿಮ್ಮ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ ಎಂದು ರಾಹುಲ್ ಹೇಳಿದರು.
ಇಂದಿನ ಯಾತ್ರೆ ಸಂಜೆ ಕೆಂಪುಕೋಟೆಯಲ್ಲಿ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 16 ರಂದು 100 ದಿನಗಳನ್ನು ಪೂರೈಸಿದ ಕಾಂಗ್ರೆಸ್ನಮೆಗಾ ಮೆರವಣಿಗೆಯು ಒಂಬತ್ತು ದಿನಗಳ ವರ್ಷಾಂತ್ಯದ ವಿರಾಮವನ್ನು ತೆಗೆದುಕೊಳ್ಳುತ್ತದೆ. ಜನವರಿ 3 ರಂದು ದೆಹಲಿಯಿಂದ ಪುನಾರಂಭಗೊಳ್ಳಲಿದೆ.
ಪ್ಯಾನ್ ಕಾರ್ಡ್ ಎಕ್ಸ್ಪೈರಿ ಡೇಟ್ ಹೊಂದಿದೆಯೇ? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ | PAN Card
BIGG NEWS: ಸಿದ್ದರಾಮಯ್ಯಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಮಹಿಳಾ ಮುಖಂಡರು ಒತ್ತಾಯ
ಜೆಡಿಎಸ್ ಅಧಿಕಾರಕ್ಕೆ ಬಂದರೇ 100 ದಿನದಲ್ಲಿ ಎನ್ ಪಿಎಸ್ ರದ್ದು – ಸಿ.ಎಂ ಇಬ್ರಾಹಿಂ | JDS Party