ಬೆಂಗಳೂರು : ‘ಹಿಂದೂ’ ಎಂಬುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದ. ಹಿಂದೂ ಪದದ ಅರ್ಥವೇ ಅಶ್ಲೀಲ ಎಂಬುದಾಗಿ ಹೇಳಿಕೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ವಿವಾದ ಸೃಷ್ಟಿಸಿದ್ದರು.
ಸತೀಶ್ ಜಾರಕಿಹೊಳಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ನಟ ಜಗ್ಗೇಶ್ ‘ ಸತೀಶ್ ಜಾರಕಿಹೊಳಿಯದ್ದು ವಾಮಾಚಾರ ಫ್ಯಾಮಿಲಿ, ಅವರು ನಮ್ಮ ಸಂಸ್ಕೃತಿಯನ್ನು ಒಪ್ಪದವರು, ಅವರಿಗೆ ನಮ್ಮ ಧರ್ಮದ ಬಗ್ಗೆ ಗೊತ್ತಾಗುವುದಿಲ್ಲ ಎಂದು ಖಾರವಾಗಿ ನುಡಿದರು,
ಡಿಕ್ಶನರಿ ಮಾಡಿದ್ದು ಆಂಗ್ಲರು, ಆಂಗ್ಲರಿಗೆ ದೇಶ ಒಡೆದು ಆಳುವ ಚಿಂತನೆಯಿತ್ತು, ಅವರಿಗೆ ದೇಶವನ್ನು ಒಟ್ಟುಗೂಡಿಸುವುದು ಬೇಕಾಗಿರಲಿಲ್ಲ, ಯಾವುದೊ ಭಾಷೆಯಲ್ಲಿ ಯಾವುದ್ಯಾವೋದೋ ಅರ್ಥ ಿರಬಹುದು, ನೀವು ಒಬ್ಬ ಹಿಂದೂವಾಗಿ ನಿಮಗೆ ಅರ್ಥವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸತೀಶ್ ಜಾರಕಿಹೊಳಿ ವಿವಾದ
ಹಿಂದೂ ಎನ್ನುವ ಪದದ ಅರ್ಥವೇ ಅಶ್ಲೀಲ ಎಂಬ ಈ ಹೇಳಿಕೆ ದೊಡ್ಡದಾಗುತ್ತಿದ್ದಂತೆ ಸತೀಶ್ ಜಾರಕಿಹೊಳಿ ಯೂ ಟರ್ನ್ ಹೊಡೆದಿದ್ದು, ನಾನು ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಜಾರಕಿಹೊಳಿ , ಸಿಂಧು ನದಿಯಿಂದ ಆಚೆಗೆ ವಾಸಿಸುವ ಜನರ ಕುರಿತು ಪರ್ಷಿಯನ್ ಭೌಗೋಳಿಕ ಪ್ರದೇಶದಲ್ಲಿ ಮೊದಲಿಗೆ ಹಿಂದೂ ಶಬ್ದ ಬಳಕೆಗೆ ಬಂದಿತು. ಕ್ರಿ.ಪ್ರೊ.550-486 ಸಂದರ್ಭದಲ್ಲಿ ನಿರ್ದಿಷ್ಟವಾಗಿ ಆರನೇ ಶತಮಾನದಲ್ಲಿ ನಮೂದಿಸಲಾಗಿದೆ. ಇದರ ಮೂಲ ವಿಕಿಪೀಡೀಯಾವಾಗಿದೆ. ಹಿಂದು ಪದದ ಕುರಿತು ವಿವಿಧ ಲೇಖಕರು ಬರೆದ ವಿಕಿಪೀಡಿಯಾ ಲೇಖನಗಳ ಆಧಾರದಲ್ಲಿ ನಾನು ಮಾತನಾಡಿದ್ದೆ , ಇದು ನನ್ನ ವೈಯಕ್ತಿಯ ಅಭಿಪ್ರಾಯವಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.
ಶಿವಮೊಗ್ಗ: ‘ಮತದಾರರ ಪಟ್ಟಿ’ಯ ವಿಶೇಷ ಪರಿಷ್ಕರಣೆ ಕುರಿತು ‘ಜಾಗೃತಿ ಕಾಲ್ನಡಿಗೆ ಜಾಥಾ’ಗೆ ಡಿಸಿ ಚಾಲನೆ