ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ ಅಂತ ಹೇಳುತ್ತಿರುವ ರೇಣುಕಸ್ವಾಮಿ ಕುಟುಂಬಕ್ಕೆ ಸ್ಯಾಂಡಲ್‌ವುಡ್‌ನಟ ಧ್ರುವಸರ್ಜಾ ಅವರು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.
ಇಂದು ರೇಣುಕಸ್ವಾಮಿಯ ಕುಟುಂಬಕ್ಕೆ ಕರೆ ಮಾಡಿದ ನಟ ಧ್ರುವ ಸರ್ಜಾ ಅವರು ನಿಮ್ಮೊಂದಿಗೆ ನಾನು ಇದ್ದೀನಿ ಅಂಥ ಹೇಳಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.ಅಂದ ಹಾಗೇ ಸಿನಿಮಾವೊಂದರಲ್ಲಿ ಆಗಿದ್ದ ತೊಂದರೆಯಿಂದ ನಟ ದರ್ಶನ್ ಮತ್ತು ಅರ್ಜುನ್ ಸರ್ಜಾ ಕುಟುಂಬದ ನಡುವೆ ಭಿನ್ನಾಪ್ರಿಯ ಉಂಟಾಗಿದೆ ಎನ್ನಲಾಗಿದೆ. ನಟ ದರ್ಶನ್ ಅರ್ಜುನ್ ಸರ್ಜಾ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಟ ಧ್ರುವಸರ್ಜಾ ಮತ್ತು ದರ್ಶನ್ ಪರಸ್ಪರ ಭಿನ್ನಪ್ರಿಯಹೊಂದಿದ್ದಾರೆ ಎನ್ನಲಾಗಿದೆ.