ಬೆಂಗಳೂರು: ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಅವರು ಜೈಲೂಟ ಬೇಡ. ಮನೆಯೂಟ ಬೇಕು ಅಂತ ಸಲ್ಲಿಸಿದ್ದಂತ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಹೀಗಾಗಿ ನಟ ದರ್ಶನ್ ಗೆ ಜೈಲು ಊಟವೇ ಗತಿ ಎನ್ನುವಂತೆ ಆಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತ ನಟ ದರ್ಶನ್ ಅವರು, ತಮಗೆ ಜೈಲೂಟ ಬೇಡ, ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೇ ಕೋರ್ಟ್ ವಾದ- ಪ್ರತಿವಾದವನ್ನು ಆಲಿಸಿದ ನಂತ್ರ, ತೀರ್ಪನ್ನು ಜುಲೈ.25ಕ್ಕೆ ಕಾಯ್ದಿರಿಸಿತ್ತು.
ಈ ಅರ್ಜಿಯ ವಿಚಾರಣೆಯನ್ನು ಇಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅಂತಿಮವಾಗಿ ಮನೆಯೂಟದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಅಂದಹಾಗೇ ಈ ಹಿಂದೆ ನಟ ದರ್ಶನ್ ಪರ ವಕೀಲರು ಜೈಲೂಟದಿಂದ ತಮ್ಮ ಕಕ್ಷಿದಾರರು ತೂಕ ಇಳಿಕೆಯಾಗಿದ್ದಾರೆ. ಅವರಿಗೆ ಮನೆಯೂಟಕ್ಕೆ ಅವಕಾಶ ನೀಡಬೇಕು. ಓದೋದಕ್ಕೆ ಪುಸ್ತಕ, ಹಾಸಿಗೆ ಅವಕಾಶ ನೀಡಬೇಕು ಅಂತ ನ್ಯಾಯಪೀಠವರನ್ನು ಕೋರಿದ್ದರು.
ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಈ ಪ್ರಕರಣದ ಅರ್ಜಿಯ ವಿಚಾರಣೆ ನಡೆಯಿತು. ಪೊಲೀಸರ ಪರ ಜೈಲು ನಿಯಮಾವಳಿಗಳಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ. ಅವಕಾಶ ನೀಡಿದರೂ 15 ದಿನಗಳ ಕಾಲ ಮಾತ್ರವೇ ಅವಕಾಶ ನೀಡಲು ನಿಯಮಾವಳಿಯಿದೆ ಅಂತ ಮನವರಿಕೆ ಮಾಡಿದ್ದರು.
ಈ ವಾದ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು, ನಟ ದರ್ಶನ್ ಅವರು ಜೈಲೂಟ ಬೇಡ, ಮನೆಯೂಟ ಬೇಕು ಎಂಬುದಾಗಿ ಸಲ್ಲಿಸಿದ್ದಂತ ಅರ್ಜಿಯ ತೀರ್ಪನ್ನು ಜುಲೈ.25ಕ್ಕೆ ಕಾಯ್ದಿರಿಸಿತ್ತು. ಈಗ ಅರ್ಜಿಯನ್ನು ವಜಾಗೊಳಿಸುವ ಮೂಲಕ ನಟ ದರ್ಶನ್ ಗೆ ಜೈಲೂಟವೇ ಗತಿ ಎನ್ನುವಂತೆ ಆಗಿದೆ.
BIG NEWS: ಆ.1ರಿಂದ ‘ಆರೋಗ್ಯ ಇಲಾಖೆ’ಯ ನೌಕರರು ‘ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ಹಾಜರಾತಿ’ ದಾಖಲು ಕಡ್ಡಾಯ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana