ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನವರು ಇದೀಗ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳ ಪುಂಡಾಟ ಮಾತ್ರ ಮುಂದುವರೆದಿದ್ದು, ಇದೀಗ ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ವಾಮನ ಚಲನಚಿತ್ರದ ಟ್ರೈಲರ್ ಲಾಂಚಿಂಗ್ ವೇಳೆ ಗಲಾಟೆ ನಡೆಸಿ ಥಿಯೇಟರ್ ನ ಬಾಗಿಲು, ಕಿಟಕಿ, ಗಾಜು ಒಡೆದು ಗಲಾಟೆ ಮಾಡಿದ್ದಾರೆ.
ಹೌದು ದರ್ಶನ್ ಅಭಿಮಾನಿಗಳಿಂದ ಹುಚ್ಚಾಟ ನಡೆದಿದ್ದು, ವಾಮನ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ದರ್ಶನ್ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಇಂದು ಪ್ರಸನ್ನ ಚಿತ್ರಮಂದಿರದಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಚಿತ್ರಮಂದಿರದ ಬಾಗಿಲು, ಕಿಟಕಿ ಕುರ್ಚಿಗಳನ್ನು ಫ್ಯಾನ್ಸ್ ಹೊಡೆದು ಹಾಕಿದ್ದಾರೆ ಟ್ರೈಲರ್ ಲಾಂಚ್ ಗೆ ಬಂದಿದ್ದ ದರ್ಶನ್ ಅಭಿಮಾನಿಗಳು ಪುಂಡಾಟ ನಡೆಸಿದ್ದಾರೆ.
ಪ್ರಸನ್ನ ಥಿಯೇಟರ್ ನ ಸೆಕೆಂಡ್ ಕ್ಲಾಸ್ನಲ್ಲಿರುವ 80 ಸೀಟ್ ಹಾಗೂ ಬಾಲ್ಕನಿಯಲ್ಲಿದ್ದ 10 ಸೀಟ್ಗಳನ್ನು ದರ್ಶನ್ ಅಭಿಮಾನಿಗಳು ಮುರಿದಿದ್ದಾರೆ. ದರ್ಶನ್ ಫ್ಯಾನ್ಸ್ ನಡೆಗೆ ಪ್ರಸನ್ನ ಥಿಯೇಟರ್ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸನ್ನ ಥಿಯೇಟರ್ ನಲ್ಲಿ ನಾಳೆ ಹೊಸ ಸಿನಿಮಾ ರಿಲೀಸ್ ಇದೆ. ದರ್ಶನ್ ಅಭಿಮಾನಿಗಳು ಸಾಕಷ್ಟು ಸೀಟ್ಗಳನ್ನು ಮುರಿದು ಹಾಕಿದ್ದಾರೆ. ನಾಳೆ ಸಿನಿಮಾ ರಿಲೀಸ್ ಗೆ ನಾವು ಹೇಗೆ ಥಿಯೇಟರ್ ಕೊಡೋದು? ಎಂದು ಸಿಬ್ಬಂದಿಗಳು ಬೇಸರ ಹೊರಹಾಕಿದ್ದಾರೆ.