ಬಳ್ಳಾರಿ: ನಗರದಲ್ಲಿನ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಇರಿಸಲಾಗಿದೆ. ಅವರ ಕೊಠಡಿಗೆ ಜೈಲು ಅಧಿಕಾರಿಗಳು ಟಿವಿಯನ್ನು ಅಳವಡಿಸಿದ್ದು, ಕೇವಲ ಸರ್ಕಾರಿ ಚಾನಲ್ ಗಳನ್ನು ವೀಕ್ಷಿಸಲು ಮಾತ್ರವೇ ಅವಕಾಶ ನೀಡಲಾಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಂತ ಅವರಿಗೆ ರಾಜಾತಿಥ್ಯವನ್ನು ಜೈಲು ಅಧಿಕಾರಿಗಳು ನೀಡಿದ್ದು ಪೋಟೋ, ವೀಡಿಯೋ ಸಹಿತ ಬಹಿರಂಗಗೊಂಡಿತ್ತು. ಹೀಗಾಗಿ ಅಲ್ಲಿಂದ ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿರುವಂತ ನಟ ದರ್ಶನ್ ಅವರು ತಮ್ಮ ಸೆಲ್ ನಲ್ಲಿ ಟಿವಿ ಅಳವಡಿಸುವಂತೆ ಜೈಲು ಅಧಿಕಾರಿಗಳನ್ನು ಕೋರಿದ್ದರು. ತಮ್ಮ ಬಗೆಗಿನ ಪ್ರಕರಣದ ಮಾಹಿತಿ ತಿಳಿಯಬೇಕಿದೆ. ಟಿವಿ ಅಳವಡಿಸುವಂತೆ ಅಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಈಗ ನಟ ದರ್ಶನ್ ಸೆಲ್ ಗೆ ಟಿವಿ ಅಳವಡಿಸಲಾಗಿದೆ. ಆದರೇ ಖಾಸಗಿ ಚಾನಲ್ ವೀಕ್ಷಣೆಯ ಸೌಲಭ್ಯ ಒದಗಿಸಿಲ್ಲ. ಕೇವಲ ಡಿಡಿ ಚಂದನ ಸೇರಿದಂತೆ ಇತರೆ ಸರ್ಕಾರಿ ಚಾನಲ್ ವೀಕ್ಷಿಸಲು ಅವಕಾಶ ನೀಡಲಾಗಿದೆ.
LCA ತೇಜಸ್ ಯುದ್ಧ ವಿಮಾನದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ‘ಮೋಹನಾ ಸಿಂಗ್’ ಪಾತ್ರ