ಬೆಂಗಳೂರು: ನಗರದ ಸಿಸಿಹೆಚ್ ನ್ಯಾಯಾಲಯದಿಂದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ನಾಳೆಗೆ ಮಧ್ಯಂತರ ಜಾಮೀನು ಆದೇಶ ಪ್ರಕಟಿಸುವುದಾಗಿ ತೀರ್ಪು ಕಾಯ್ದರಿಸಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕಾದರೂ ದಾಸನಿಗೆ ಸಿಗುತ್ತಾ ರಿಲೀಫಅ ಅನ್ನೋದನ್ನು ಕಾದು ನೋಡಬೇಕಿದೆ.
ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು. ನಟ ದರ್ಶನ್ ಪರವಾಗಿ ಹಿರಿಯ ವಕೀಲ ನಾಗೇಶ್ ಅವರು ವಾದಿಸಿ, ಅನಾರೋಗ್ಯದ ಕಾರಣದಿಂದ, ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದರು.
ಇದಕ್ಕೆ ಪ್ರತಿಯಾಗಿ ವಾದಿಸಿದಂತ ಎಸ್ ಪಿಪಿ ಪ್ರಸನ್ನ ಕುಮಾರ್ ಅವರು, ಅನಾರೋಗ್ಯದ ಕಾರಣದಿಂದ ಜಾಮೀನು ನೀಡುವುದಕ್ಕೆ ಆಕ್ಷೇಪಿಸಿದರು. ಅಲ್ಲದೇ ಮೆಡಿಕಲ್ ಬೋರ್ಡ್ ರಚಿಸಿ, ಅಲ್ಲಿ ತೀರ್ಮಾನಿಸಿ ನಿರ್ಧಾರ ಪ್ರಕಟಿಸುವಂತೆ ನ್ಯಾಯಪೀಠದ ಗಮನಕ್ಕೆ ತಂದರು.
ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ತೀರ್ಪನ್ನು ನಾಳೆ ಪ್ರಕಟಿಸುವುದಾಗಿ ಹೇಳಿ, ಆದೇಶ ಕಾಯ್ದರಿಸಿದೆ. ಹೀಗಾಗಿ ನಾಳೆ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಈ ಮೂಲದ ದೀಪಾವಳಿ ಹಬ್ಬಕ್ಕಾದರೂ ದಾಸನಿಗೆ ಸಿಗುತ್ತಾ ರಿಲೀಫ್ ಅನ್ನೋದನ್ನು ಕಾದು ನೋಡಬೇಕಿದೆ.
BREAKING: BBMP ವ್ಯಾಪ್ತಿಯ ‘ಕರಡು ಮತದಾರರ ಪಟ್ಟಿ 2025’ ಪ್ರಕಟ | BBMP Voter List 2025
BIG NEWS : ದೇವಸ್ಥಾನಗಳಲ್ಲಿ `VIP’ ದರ್ಶನ ಸಮಾನತೆಯ ಹಕ್ಕಿನ ಉಲ್ಲಂಘನೆ : ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ!
BIG NEWS : ತಾಯಿಯ ಮರಣದ ನಂತರ ಮಗಳು `ಅನುಕಂಪದ ನೇಮಕಾತಿ’ಗೆ ಅರ್ಹ : ಹೈಕೋರ್ಟ್ ಮಹತ್ವದ ಆದೇಶ.!