ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪು ಹೊರಬೀಳಲಿದ್ದು, ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯವು ಜಾಮೀನು ಕುರಿತಂತೆ ತೀರ್ಪು ಪ್ರಕಟಿಸಲಿದೆ.
ಇನ್ನು ಕೊಲೆ ಆರೋಪಿ ನಟ ದರ್ಶನವರು ಬಳ್ಳಾರಿ ಜೈಲಲ್ಲಿ ಇದ್ದು ಅವರು ಇತ್ತೀಚಿಗೆ ತೀವ್ರವಾಗಿ ಬೆನ್ನು ನೋವು ನಿಂದ ಬೀಳುತ್ತಿದ್ದಾರೆ ಅಲ್ಲದೆ ವೈದ್ಯರು ಕೂಡ ತಪಾಸಣೆ ಮಾಡಿದ್ದು, ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಆದರೆ ಇಂದು ಅವರ ಜಾಮೀನು ತೀರ್ಪು ಅವರ ಬೀಳುವ ಹಿನ್ನೆಲೆಯಲ್ಲಿ ಟೆನ್ಶನ್ ಅಲ್ಲಿ ಇದ್ದಾರೆ. ಈಗಾಗಲೇ 125 ದಿನಗಳ ಕಾಲ ಜೈಲಲ್ಲಿ ಕಳೆದಿದ್ದಾರೆ.
ಇದರ ಮಧ್ಯ ಜಾಮೀನು ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿ ಚಡಪಡಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಸಿಗದೇ ನಟ ದರ್ಶನ್ ಅವರು ಟೆನ್ಶನ್ ಅಲ್ಲಿ ಇದ್ದಾರೆ. ಅಲ್ಲದೆ ಊಟ ಕೊಡಲು ಬಂದ ಸಿಬ್ಬಂದಿಯ ಬಳಿಯೂ ಕೂಡ ದರ್ಶನ್ ಅವರು ಜಾಮೀನು ವಿಚಾರವಾಗಿ ಮಾಹಿತಿ ಕೇಳಿದ್ದಾರೆ ಎನ್ನಲಾಗುತ್ತಿದೆ.