ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಜರುಗಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ.
ನಟ ದರ್ಶನ್ ಅವರು ಅನಾರೋಗ್ಯ ಸಂಬಂಧ ಮೈಸೂರಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಅವರನ್ನು ಪರೀಕ್ಷಿಸಿದಂತ ವೈದ್ಯರು, ಅವರ ಡಿಸ್ಕ್ ಜರುಗಿರೋದನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ನಟ ದರ್ಶನ್ ಅವರಿಗೆ ಕಾಟೇರ ಚಲನಚಿತ್ರದ ಚಿತ್ರೀಕರಣದ ವೇಳೆಯಲ್ಲೇ ಈ ಸಮಸ್ಯೆ ಎದುರಾಗಿತ್ತಂತೆ. ಆ ನೋವಿನ ನಡುವೆಯೂ ಅವರು ಚಿತ್ರೀಕರಣದಲ್ಲಿ ಬಾಗಿಯಾಗಿದ್ದರು ಎಂಬುದಾಗಿ ತಿಳಿದು ಬಂದಿದೆ.
ತುರ್ತು ಶಸ್ತ್ರ ಚಿಕಿತ್ಸೆ ನಡುವೆಯೂ ಫಿಜಿಯೋ ಥೆರಫಿ ಹಾಗೂ ಮಾತ್ರೆಗಳ ಮೂಲಕ ಸದ್ಯಕ್ಕೆ ಸಮಸ್ಯೆ ನಿವಾರಣೆಗೆ ಅವರು ಪ್ರಯತ್ನಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕವೇ ಸಮಸ್ಯೆ ನಿವಾರಿಸಲು ಸಾಧ್ಯ. ಶಸ್ತ್ರ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸೂಚಿಸಿರೋದಾಗಿ ಹೇಳಲಾಗುತ್ತಿದೆ.
ಅಮೆರಿಕಕ್ಕೆ ಭಾರತೀಯರ ಕಳ್ಳಸಾಗಣೆ : ಕೆನಡಾದ 200ಕ್ಕೂ ಹೆಚ್ಚು ಕಾಲೇಜುಗಳ ಕುರಿತು ‘ED’ ತನಿಖೆ