ಬೆಂಗಳೂರು : ನಟ ದರ್ಶನ್ ( Actor Darshan ) ಮೇಲೆ ಚಪ್ಪಲಿ ಎಸೆತವನ್ನು ಶಾಸಕ ಜಮೀರ್ ಅಹಮದ್ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಮೀರ್ ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿರುವುದರಿಂದ ದರ್ಶನ್ರ ವ್ಯಕ್ತಿತ್ವಕ್ಕಾಗಲಿ, ಅವರ ಮೇಲೆ ನಾವಿಟ್ಟಿರುವ ಪ್ರೀತಿ, ಅಭಿಮಾನಕ್ಕಾಗಲಿ ಯಾವ ಧಕ್ಕೆಯಾಗಿಲ್ಲ. ಇದು ಚಪ್ಪಲಿ ಎಸೆದವನ ಹೀನ ಮನಸ್ಥಿತಿಯನ್ನು ಅನಾವರಣಗೊಳಿಸಿದೆ
ಗೆಳೆಯ ದರ್ಶನ್ ಅವರ ಜೊತೆ ನಾವಿದ್ದೇವೆ. ಇಂಥಾ ಘಟನೆ ಮತ್ತೆಂದೂ ಮರುಕಳಿಸದಿರಲಿ. ಕನ್ನಡ ನಾಡೆಂಬ ಕುಟುಂಬದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಕೆಟ್ಟ ಮನಸುಗಳಿಗೆ ನನ್ನ ದಿಕ್ಕಾರವಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ನಾಡು ಸುಸಂಸ್ಕೃತರ ನೆಲ, ಸಿನಿಮಾ ನಟರನ್ನು ಅಣ್ಣ ತಮ್ಮಂದಿರಂತೆ, ಗುರುವಿನಂತೆ ಕಂಡ ಇತಿಹಾಸ ಈ ನೆಲಕ್ಕಿದೆ. ಚಪ್ಪಲಿ ಎಸೆಯುವುದು ನಾಡಿಗೆ ಒಗ್ಗುವುದಿಲ್ಲ. ಇಂಥಾ ಹೀನ ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ನಾಡು ಸುಸಂಸ್ಕೃತರ ನೆಲ, ಸಿನಿಮಾ ನಟರನ್ನು ಅಣ್ಣ ತಮ್ಮಂದಿರಂತೆ, ಗುರುವಿನಂತೆ ಕಂಡ ಇತಿಹಾಸ ಈ ನೆಲಕ್ಕಿದೆ. ಚಪ್ಪಲಿ ಎಸೆಯುವುದು ನಾಡಿಗೆ ಒಗ್ಗುವುದಿಲ್ಲ. ಇಂಥಾ ಹೀನ ಕೃತ್ಯವನ್ನು ಯಾರೂ ಬೆಂಬಲಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಇದು ಇಲ್ಲಿಗೆ ಕೊನೆಯಾಗಬೇಕು.
5/6— B Z Zameer Ahmed Khan (@BZZameerAhmedK) December 21, 2022
ಗೆಳೆಯ @dasadarshan ಅವರ ಜೊತೆ ನಾವಿದ್ದೇವೆ. ಇಂಥಾ ಘಟನೆ ಮತ್ತೆಂದೂ ಮರುಕಳಿಸದಿರಲಿ. ಕನ್ನಡ ನಾಡೆಂಬ ಕುಟುಂಬದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಕೆಟ್ಟ ಮನಸುಗಳಿಗೆ ನನ್ನ ದಿಕ್ಕಾರವಿದೆ.
6/6— B Z Zameer Ahmed Khan (@BZZameerAhmedK) December 21, 2022
ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುವ @dasadarshan ಅವರ ಮೇಲೆ ಚಪ್ಪಲಿ ಎಸೆದಿರುವುದರಿಂದ ದರ್ಶನ್ರ ವ್ಯಕ್ತಿತ್ವಕ್ಕಾಗಲಿ, ಅವರ ಮೇಲೆ ನಾವಿಟ್ಟಿರುವ ಪ್ರೀತಿ, ಅಭಿಮಾನಕ್ಕಾಗಲಿ ಯಾವ ಧಕ್ಕೆಯಾಗಿಲ್ಲ. ಇದು ಚಪ್ಪಲಿ ಎಸೆದವನ ಹೀನ ಮನಸ್ಥಿತಿಯನ್ನು ಅನಾವರಣಗೊಳಿಸಿದೆ.
4/6— B Z Zameer Ahmed Khan (@BZZameerAhmedK) December 21, 2022