ಬೆಂಗಳೂರು : ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 8 ಮಂದಿಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಅಭಿಷೇಕ ಅಂಬರೀಶ್, ರಾಕ್ ಲೈನ್ ವೆಂಕಟೇಶ್,ವಿ ಹರಿಕೃಷ್ಣನಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದ್ದು ಸದ್ಯ ನಾಲ್ವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇನ್ನು ನಾಲ್ವರು ಸೆಲಬ್ರೆಟಿಗಳಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ನಟ ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್ ಮತ್ತು ನಿರ್ದೇಶಕ ತರುಣ ಸುಧೀರ್ಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಓರಿಯನ್ ಮಾಲ್ ನಲ್ಲಿ ಕಾಟೇರ ಸೆಲೆಬ್ರಿಟಿ ಶೋ ಇತ್ತು ಅದರ ಎದುರುಗಡೆ ಇರುವಂತಹ ರೆಸ್ಟೋಬರ್ ನಲ್ಲಿ ಸೇರಿ ಸೆಲೆಬ್ರೇಶನ್ ಮಾಡುತ್ತಾರೆ. ಒಂದು ಗುಂಟೆಗೆ ಸಬ್ ಇನ್ಸ್ಪೆಕ್ಟರ್ ಬಾರಿಗೆ ಭೇಟಿ ನೀಡಿ ಮಧ್ಯ ಸರಬರಾಜು ಮಾಡುವುದು ನಿಲ್ಲಿಸಬೇಕೆಂದು ಹೇಳುತ್ತಾರೆ ಆದರೆ ಇವರು ಮೂರು ಗಂಟೆ ನಂತರ ಕೂಡ ಪಾರ್ಟಿ ಮಾಡುತ್ತಾರೆ ನಂತರ ಬಾರ್ನ ಮಾಲೀಕ ಹಾಗೂ ಕ್ಯಾಶಿಯರ್ ವಿರುದ್ಧ ದಾಖಲಾಗುತ್ತೆ.
ನಸುಕಿನ ಜವ ಮೂರು ವರೆಗೂ ಕೂಡ ಪಬ್ನಲ್ಲಿ ಸೆಲೆಬ್ರಿಟಿಗಳು ಪಾಟೀಲರ ಚಲನಚಿತ್ರ ಸಕ್ಸಸ್ ಸೆಲೆಬ್ರೇಶನ್ ಮಾಡುತಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ಆರು ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗಿದ್ದು ಸದ್ಯ 8 ಸೆಲೆಬ್ರಿಟಿ ಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ನಾಲ್ವರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.