ಬೆಂಗಳೂರು : ಇತ್ತೀಚೆಗೆ ಕಾಂತಾರ ಸಿನಿಮಾ ವಿವಾದ ಎಬ್ಬಿಸಿದ ನಟ ಚೇತನ್ ಇದೀಗ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.
ಹಿಂದೂ ಪದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಪರ ನಟ ಚೇತನ್ ಬ್ಯಾಟ್ ಮಾಡಿದ್ದು, ಹಿಂದೂ ಪದದ ಅಧ್ಯಯನದ ಅಗತ್ಯವಿದೆ ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಚೇತನ್, ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಆರ್ಟಿಕಲ್-19 ರ ಅಭಿವ್ಯಕ್ತಿ ಸ್ವಾತಂರ್ತ್ಯಕ್ಕನುಗುಣವಾಗಿದೆ. ಪರ್ಷಿಯನ್ ಪದವಾದ ಹಿಂದೂವಿನ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಜಾರಕಿಹೊಳಿ ಅವರು ರಾಜಕೀಯ ಲಾಭಕ್ಕಾಗಿ ಹಿಂದೂ ಕಾಂಗ್ರೆಸ್ ಜೊತೆ ನಿಲ್ಲುವುದರ ಬದಲಾಗಿ ಸಮನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಜಾತಿ, ಧರ್ಮ ಬಿಟ್ಟರೆ ಕಾಂಗ್ರೆಸ್-ಬಿಜೆಪಿಗೆ ಬೇರೆ ವಿಷಯ ಇಲ್ಲ : H.D ಕುಮಾರಸ್ವಾಮಿ ಕಿಡಿ
ಬೆಂಗಳೂರಿನಲ್ಲಿ ಗೂಂಡಾ ಕಾಯ್ದೆಯಡಿ ಇಬ್ಬರು ಕುಖ್ಯಾತ ರೌಡಿ ಶೀಟರ್ ಸಹೋದರರ ಬಂಧನ