ಬೆಂಗಳೂರು : ಇರಾನ್-ಇಸ್ರೇಲ್ ಯುದ್ಧ ಆಗುತ್ತಿದೆ. ಪೆಟ್ರೋಲ್, ಗ್ಯಾಸ್ ಬರುತ್ತಿಲ್ಲ. ಮನೆಬಳಕೆ ಸಿಲಿಂಡರ್ಗೆ ಸಮಸ್ಯೆ ಇಲ್ಲ. 28 ದಿನದ ಉಪಯೋಗಕ್ಕೆ ಕೊಡುತ್ತೇವೆ. ಸಿಲಿಂಡರ್ ಸ್ಟೋರೇಜ್ಗೆ ಅವಕಾಶವಿಲ್ಲ. ಒಂದು ವೇಳೆ ಮಾಡಿದರೆ ಕ್ರಮ ಜರುಗಿಸುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ವಿಧಾನಸಭೆಯಲ್ಲಿಂದು ವಾಣಿಜ್ಯ ಎಲ್ಪಿಜಿ ಕೊರತೆ ತೀವ್ರ ಸದ್ದುಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಯಿತು. ನಾನು ಬೆಳಗ್ಗೆಯೇ ತೈಲ ಮಾರುಕಟ್ಟೆ ಕಂಪನಿ ಜೊತೆ ಸಭೆ ಮಾಡಿದ್ದೇನೆ. ಇವತ್ತಿನವರೆಗೆ ಸರಬರಾಜು ಸಮಸ್ಯೆ ಇಲ್ಲ. 20.30% ನಮ್ಮ ಸ್ವಂತ ಉತ್ಪಾದನೆ ಇದೆ. 70%ರಷ್ಡು ವಿದೇಶದಿಂದ ಬರಬೇಕು. ಆಯಿಲ್ ತುಂಬಿರುವ ಹಡಗನ್ನು ಬಿಡುತ್ತಿಲ್ಲ.
ಇರಾನ್-ಇಸ್ರೇಲ್ ಯುದ್ಧ ಆಗುತ್ತಿದೆ. ಪೆಟ್ರೋಲ್, ಗ್ಯಾಸ್ ಬರುತ್ತಿಲ್ಲ. ಮನೆಬಳಕೆ ಸಿಲಿಂಡರ್ಗೆ ಸಮಸ್ಯೆ ಇಲ್ಲ. 28 ದಿನದ ಉಪಯೋಗಕ್ಕೆ ಕೊಡುತ್ತೇವೆ. ಬೇರೆಯ ಉಪಯೋಗವನ್ನು ಸದ್ಯಕ್ಕೆ ನಿಲ್ಲಿಸುತ್ತೇವೆ. ಗ್ಯಾಸ್ ಹೆಚ್ಚು ಖರ್ಚು ಮಾಡುವುದು ಬೇಡ. ಸ್ಟೋರೇಜ್ ಮಾಡುವುದು ಬೇಡ. ಆದರೆ ವಾಣಿಜ್ಯ ಸಿಲಿಂಡರ್ ಸಮಸ್ಯೆ ಇದೆ ಎಂದರು.
ಸಿಲಿಂಡರ್ 14 ಕೆಜಿ ಇರುತ್ತದೆ. ನಾಲ್ಕು ಜನರ ಕುಟುಂಬಕ್ಕೆ ತಿಂಗಳಿಗೆ ಸಾಕು ಅಂದಿದ್ದಾರೆ. ಗಂಭೀರವಾದ ಪರಿಸ್ಥಿತಿ ಇದೆ. ಯಾರೂ ಆತಂಕಪಡುವ ಸ್ಥಿತಿ ಬೇಡ. ಒಂದು ತಿಂಗಳಿಗೆ ಒಂದು ಸಿಲಿಂಡರ್ ಕೊಡುವ ನಿರ್ಧಾರವಾಗಿದೆ. ಸಿಲಿಂಡರ್ ಸ್ಟೋರೇಜ್ಗೆ ಅವಕಾಶವಿಲ್ಲ. ಒಂದು ವೇಳೆ ಮಾಡಿದರೆ ಕ್ರಮ ಜರುಗಿಸುತ್ತೇವೆ. ವಾಣಿಜ್ಯ ಸಿಲಿಂಡರ್ ಆಸ್ಪತ್ರೆಗೆ ಕೊಡಬೇಕು. ಶಾಲೆಗಳಿಗೆ ನಾವು ಕೊಡಬೇಕು. ಈ ಬಗ್ಗೆ ಪ್ರತಿವಾರ ಸಿಎಸ್ ಸಭೆ ನಡೆಸುತ್ತಾರೆ ಎಂದರು.








