ಬೆಂಗಳೂರು : ಮೈಸೂರಿನಲ್ಲಿ ಬಂಧಿತನಾದ ಹುಸಿ ಬಾಂಬ್ ಬೆದರಿಕೆ ಆರೋಪಿ ಶ್ರೀನಿವಾಸ್ ಲೂಯಿಸ್, ಪಾಕಿಸ್ತಾನದ ಸರ್ಕಾರಿ ಕಚೇರಿ ಮತ್ತು ಕೋರ್ಟ್‌ಗಳಿಗೂ ಬೆದರಿಕೆ ಇಮೇಲ್ ಕಳುಹಿಸಿರುವುದು ದೆಹಲಿ ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿದೆ. ಡಾರ್ಕ್ ವೆಬ್ ಮತ್ತು 50ಕ್ಕೂ ಹೆಚ್ಚು ಇಮೇಲ್ ಐಡಿಗಳನ್ನು ಬಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈತ ಆತಂಕ ಸೃಷ್ಟಿಸಿದ್ದ.
ಹೌದು ಹುಸಿ ಬಾಂಬ್ ಸಂದೇಶಗಳ ರೂವಾರಿ ಶ್ರೀನಿವಾಸ್ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರ ವಿಚಾರಣೆಯಲ್ಲಿ ಸ್ಪೋಟಕವಾದ ಮಾಹಿತಿ ಬಹಿರಂಗವಾಗಿದೆ ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈತ ಹೊಸ ಬೆದರಿಕೆ ಸಂದೇಶ ಕಳುಹಿಸಿದ್ದ. ಪಾಕಿಸ್ತಾನದ ಸರಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಕರೆ ಮಾಡಿದ್ದ. ಸದ್ಯ ಲ್ಯಾಪ್ಟಾಪ್ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿದ್ದು, ಸದ್ಯ ಶ್ರೀನಿವಾಸ್ ಲೂಯಿಸ್ ದೆಹಲಿ ಪೊಲೀಸರ ಕಷ್ಟಡಿಯಲ್ಲಿ ಇದ್ದಾನೆ.
ದೇಶಾದ್ಯಂತ ಕೋರ್ಟ್, ವಿಧಾನಸಭೆ, ಸರಕಾರಿ ಕಚೇರಿಗಳು ಶಾಲಾ ಕಾಲೇಜುಗಳಿಗೆ ಬಾಂಬ್ ಬೆದರಿಯ ಹಾಕಿದ್ದ ಶ್ರೀನಿವಾಸ ನನ್ನ ಮೈಸೂರಲ್ಲಿ ಅರೆಸ್ಟ್ ಮಾಡಿದ್ದರು. ಇವಳೇ ಇಮೇಲ್ ಹಾಗೂ ಆತನ ಲ್ಯಾಪ್ಟಾಪ್ ಮಾಹಿತಿ ಆಧರಿಸಿ ವಿಚಾರಣೆ ನಡೆಸಿದ್ದು ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಕೋರ್ಟ್ ಮತ್ತು ಶಾಲಾ ಕಾಲೇಜುಗಳಿಗೂ ಆತ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು ಬಹಿರಂಗವಾಗಿದೆ. ಪಾಕಿಸ್ತಾನದ ಸ್ಥಳಗಳನ್ನು ಪತ್ತೆ ಮಾಡಲು ಗೂಗಲ್ ಮ್ಯಾಪ್ ಬಳಕೆ ಮಾಡಿದ್ದ ಪೊಲೀಸರಿಗೆ ಸಿಕ್ಕಿಬಿಡುವುದಂತೆ ಡಾರ್ಕ್ ವೆಬ್ ಸಹ ಬೆಳೆಸಿದ್ದ ಕನ್ನಡ ಇಂಗ್ಲಿಷ್ ನಲ್ಲಿ ಹಲವು ಬಾರಿ ಇ-ಮೇಲ್ ಸಂದೇಶ ಕಳುಹಿಸಿದ್ದು 50ಕ್ಕೂ ಹೆಚ್ಚು ಇಮೇಲ್ ಐಡಿ ಬಳಕೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.








