ಪಾಟ್ನಾ: ಬಿಹಾರ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡದಿಂದ ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
ಬಿಹಾರದ ಸರನ್ನಲ್ಲಿ ನಡೆದ ಕಳ್ಳಾಭಟ್ಟಿ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದಿದ್ದು, ಈ ನಕಲಿ ಮದ್ಯ ಸೇವಿಸಿ ಬರೊಬ್ಬರಿ 70 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಕೇಸ್ಗೆ ಸಂಬಂಧ ಪಟ್ಟ ಪ್ರಮುಖ ಆರೋಪಿ ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈ ಎಂದು ಗುರುತಿಸಲಾಗಿದೆ. ಕಳ್ಳಾಭಟ್ಟಿ ಸೇವಿಸಿ ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಶ್ರಖ್ ಹಾಗೂ ಇಶುಪುರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 2 ಎಫ್ಐಆರ್ಗಳಲ್ಲಿ ಆರೋಪಿಗಳ ಹೆಸರು ಇಲ್ಲವಾದರೂ ಎಸ್ಐಟಿ ತನಿಖೆಯ ವೇಳೆ ಅಖಿಲೇಶ್ ಭಾಗಿಯಾಗಿರುವುದು ಖಚಿತವಾಗಿದೆ.