ಬೆಂಗಳೂರು : ಕೋರ್ಟ್ ಗೆ ಹಾಜರುಪಡಿಸಲೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೃತನನ್ನು ಆರೋಪಿ ವಿನೋದ್ ಎಂದು ಗುರುತಿಸಲಾಗಿದೆ. ಈತ 2017 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಯಾಗಿದ್ದು, ವಿಚಾರಣೆಗೆ ಬರದೇ ಈತ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆ ಆರೋಪಿ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.ಈ ಹಿನ್ನೆಲೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು. ಇಂದು ಕೋರ್ಟ್ ಆತನನ್ನು ಕರೆ ತರಲು ಪೊಲೀಸರು ಸಿದ್ದತೆ ನಡೆಸಿದ್ದರು, ಆದರೆ ಅಷ್ಟರಲ್ಲೇ ವಿನೋದ್ ಠಾಣೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಭಕ್ತಿ ಗಾರ್ಡನ್ ನಿವಾಸಿ ವಿನೋದ್ (23) ಮೃತ ದುರ್ದೈವಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಲಾಕಪ್ಡೆತ್ ಆರೋಪ ಮಾಡಲಾಗಿದೆ. ಠಾಣೆ ಪೊಲೀಸರು, ಆತನನ್ನು ಠಾಣೆಯ ಸೆಲ್ನಲ್ಲಿಟ್ಟಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ವರದಿ ಬಳಿಕ ಮೃತನ ಸಾವಿಗೆ ನಿಖರ ಗೊತ್ತಾಗಲಿದೆ. ಪೊಲೀಸರ ಹಲ್ಲೆಯಿ೦ದಲೇ ಲಾಕಪ್ನಲ್ಲಿಯೇ ವಿನೋದ್ ಸಾವನ್ನಪ್ಪಿದ್ದಾನೆ. ಇದೊಂದು ಸಹಜ ಸಾವಲ್ಲ, ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ವಿನೋದ್ ಕುಟು೦ಬ ಸದಸ್ಯರು ಆರೋಪಿಸಿದ್ದಾರೆ.
SHOCKING NEWS: ವಿವಾಹೇತರ ಸಂಬಂಧ ಶಂಕೆ: ಪತ್ನಿಯನ್ನು ತುಂಡರಿಸಿ ಕಾಲುವೆಗೆ ಎಸೆದ ಪತಿ
BREAKING NEWS : ಇಂದಿನಿಂದ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ : ಬೆಳಗ್ಗೆ 10:30 ಕ್ಕೆ ಸಿಎಂ ಬೊಮ್ಮಾಯಿ ಚಾಲನೆ