ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ರಣದಮ್ಮ ಕಾಲೋನಿಯಲ್ಲಿ ದೊಡ್ಡಮ್ಮನನ್ನೇ ಕೊಂದಿದ್ದ ಆರೋಪಿ ಮಹಾಂತೇಶನನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಮಲಮ್ಮ ಕೊಂದು ಹಾಕಿದ್ದಾರೆ. ಕಿವಿಯೋಲೆ ಕದ್ದು ಪರಾರಿಯಾಗಿದ್ದ ಆರೋಪಿ ಮಹಾಂತೇಶ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.ಅಕ್ಟೋಬರ್ 24ರಂದು ದೊಡ್ಡಮ್ಮ ಕಮಲಮ್ಮ ಮಲಗಿದಾಗ ಕೊಲೆ ಮಾಡಿ ಕಿವಿಯೋಲೆ, ಬಂಗಾರದ ಸರ ಕದ್ದು ಮಹಾಂತೇಶ್ ಪರಾರಿಯಾಗಿದ್ದ.
ದೊಡ್ಡಮ್ಮನ ಮನೆಯಲ್ಲಿ ಎರಡು ದಿನ ವಾಸವಿದ್ದು, ಬಂಗಾರಕ್ಕಾಗಿ ಕೊಲೆ ಮಾಡಿದ್ದ. ಕಮಲಮ್ಮನ ಮಗ ಪ್ರಭಯ್ಯ ತಾಯಿ ಕೊಲೆಯಾದ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಬೆಳಗಾವಿಯಲ್ಲಿ ಪಾಪಿ ಮಹಾಂತೇಶ್ನನ್ನು ಬಂಧಿಸಿದ್ದಾರೆ.