ಕಟ್ನಿ (ಮಧ್ಯಪ್ರದೇಶ) : ಅಪಘಾತವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಬಾರದ ಕಾರಣ ಗಾಯಾಳು ವ್ಯಕ್ತಿಯನ್ನು ಸ್ಥಳೀಯರು ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದೊಯ್ದಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರ್ಹಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಸೋಮವಾರ ಬರ್ಹಿ ಖತೌಲಿ ರಸ್ತೆಯಲ್ಲಿ ಎರಡು ಬೈಕ್ಗಳು ಪರಸ್ಪರ ಡಿಕ್ಕಿ ಹೊಡೆದು ವ್ಯಕ್ತಿಗೆ ತೀವ್ರ ಗಾಯಗಳಾಗಿತ್ತು. ಇದನ್ನು ನೋಡಿದ ಸ್ಥಳೀಯರು ಸಹಾಯಕ್ಕಾಗಿ ಧಾವಿಸಿ ಆಂಬ್ಯುಲೆನ್ಸ್ಗೆ ಕರೆ ಮಾಡಿದರು. ಆದರೆ, ಆಂಬ್ಯುಲೆನ್ಸ್ 30 ನಿಮಿಷವಾದ್ರೂ ಸ್ಥಳಕ್ಕೆ ಬರಲಿಲ್ಲ. ಆತನ ಸ್ಥಿತಿ ಹದಗೆಟ್ಟಿದ್ದನ್ನು ಕಂಡ ಸ್ಥಳೀಯರು ಜೆಸಿಬಿಯ ಮುಂಭಾಗದ ಬಕೆಟ್ ಒಳಗೆ ಮಲಗಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
#WATCH | Madhya Pradesh: Accident victim in Katni taken to hospital in a JCB as the ambulance got late in arriving at the accident spot (13.09) pic.twitter.com/f2qcMvUmcV
— ANI MP/CG/Rajasthan (@ANI_MP_CG_RJ) September 14, 2022
BIG NEWS: ಪ್ರತೀ ಲೀ. ಹಾಲಿನ ದರ 3 ರೂ. ಹೆಚ್ಚಳಕ್ಕೆ ತೀರ್ಮಾನ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
BIG NEWS: ಅಗತ್ಯ ಔಷಧಗಳ ಪಟ್ಟಿ ಸೇರಿದ ’34 ಹೊಸ ಔಷಧ’ಗಳು: ‘ಕ್ಯಾನ್ಸರ್ ಮೆಡಿಸನ್ಸ್’ ಈಗ ಕೊಂಚ ಅಗ್ಗ