ಸುಭಾಷಿತ :

Friday, April 3 , 2020 7:30 AM

ಭೀಕರ ರಸ್ತೆ ಅಪಘಾತ : ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ, ಮೂವರು ಸಾವು


Wednesday, January 22nd, 2020 10:41 am

ಬೀದರ್ : ಗೂಡ್ಸ್ ಕ್ಯಾರಿಯರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಮಿನಕೇರಾ ಕ್ರಾಸ್ ಬಳಿ ನಡೆದಿದೆ.

ಗೂಡ್ಸ್ ಕ್ಯಾರಿಯರ್ ಗೆ ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಅನ್ಸರ್ ಬಸಂತಪೂರ್, ವಿಜಯ್ ಕುಮಾರ್ ಬಸಂತಾಪೂರ್, ಇಸ್ಮಯಿಲ್ ಎಂದು ಗುರುತಿಸಲಾಗಿದೆ. ಮೃತರು ಗೂಡ್ಸ್ ಕ್ಯಾರಿಯರ್ ನಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್ ಗೆ ಹೊರಟಿದ್ದರು.

ಘಟನಾ ಸ್ಥಳಕ್ಕೆ ಬೀದರ್ ಗ್ರಾಮೀಣಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions