ಬೆಂಗಳೂರು ಗ್ರಾಮಾಂತರ : ಎರಡು ಲಾರಿಗಳ ನಡುವೆ ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯ ದಾಬಸ್ ಪೇಟೆ ಸಮೀಪದ ಹನುಮಂತಪುರ ಗೇಟ್ ಬಳಿ ನಡೆದಿದೆ.
ಹಿಂದಿನಿಂದ ಇನ್ನೊಂದು ಲಾರಿ ಗುದ್ದಿದ ರಭಸಕ್ಕೆ ಮತ್ತೊಂದು ಲಾರಿ ರಸ್ತೆ ಮಧ್ಯೆಯೇ ಪಲ್ಟಿಯಾಗಿದೆ, ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.
ಘಟನೆ ನಡೆದ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು. ವಾಹನ ಪಲ್ಟಿಯಾಗಿದ್ದರಿಂದ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಕೆಲ ಕಾಲ ಪರದಾಡಿದರು.
‘ಕಾಂತಾರ’ ಚಿತ್ರ ವೀಕ್ಷಣೆಗೆ ಬಂದ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಪುಂಡರು