ಹಾಸನ: ಹಾಸನಾಂಬೆ ದೇಗುಲದಲ್ಲಿ ಎಸಿ ಜಗದೀಶ್ ದರ್ಪ ತೋರಿದ್ದಾರೆ. ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇವಾಲಯಕ್ಕೆ ನುಗ್ಗಿದಕ್ಕೆ ಹಾಸನದ ಉಪವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ.
BREAKING NEWS : ಶಾಸಕ ಎಂ.ಪಿ. ರೇಣುಕಾಚಾರ್ಯ ಆಪ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!
ಕುಟುಂಬಸ್ಥರು, ಭಕ್ತರು, ಅಧಿಕಾರಿಗಳು ನಡುವೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಎಸಿ ಜಗದೀಶ್ ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಲಕ್ಷಾಂತರ ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ದೇವಿ ದರ್ಶನಕ್ಕಾಗಿ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರು ತಮ್ಮ ಪರಿವಾರ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ.
BREAKING NEWS : ಶಾಸಕ ಎಂ.ಪಿ. ರೇಣುಕಾಚಾರ್ಯ ಆಪ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!
ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ ಮಾಡಿ ವಿಐಪಿ ಗೇಟ್ ನಲ್ಲಿ ಎಂಟ್ರಿ ಆಗಿದ್ದಾರೆ. ಇದನ್ನು ಕಂಡ ಎಸಿ ಜಗದೀಶ್ ಅವರು ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೋ ಓಡಿ ಬರ್ತಿದ್ದಿಯಾ? ನಿನಗೆ ಈ ಗೇಟ್ ನಲ್ಲಿ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಕ್ಯೂ ನಲ್ಲಿ ಹೋಗೋದ್ ಬಿಟ್ಟು ಇಲ್ಲಿ ಯಾಕೆ ಬರ್ತಿದ್ದಿಯಾ ಅಂತ ಸಿಟ್ಟಾಗಿದ್ದಾರೆ. ಆಗ ಶಿವೇಗೌಡರು ತಾನೂ ಜಿ.ಪಂ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದಾರೆ.
BREAKING NEWS : ಶಾಸಕ ಎಂ.ಪಿ. ರೇಣುಕಾಚಾರ್ಯ ಆಪ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!