ಕೆಎನ್ಎನ್ ಡಿಜಿಟಲ್ ಡೆಸ್ಕ್ : ಎಣ್ಣೆ ಸ್ನಾನ ಮಾಡುವುದು ಒಂದು ಒಳ್ಳೆಯ ಅಭ್ಯಾಸ. ನಮ್ಮಲ್ಲಿ ಯುಗಾದಿ ಮತ್ತು ದೀಪಾವಳಿಗೆ ಮಾತ್ರ ಎಣ್ಣೆಸ್ನಾನವನ್ನು ಸೀಮಿತಿಗೊಳಿಸಲಾಗಿದೆ. ಆದರೆ ವಾರಕ್ಕೆ ಎರಡು ರಿಂದ ಮೂರು ಭಾರಿ ಎಣ್ಣೆ ಸ್ನಾನ ಮಾಡಬಹುದು. ತಲೆಯಿಂದ ಹಿಡಿದು ಪಾದದವರೆಗೆ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವ ಪದ್ಧತಿಯನ್ನು ಅಭ್ಯಂಜನ ಅಥವಾ ಅಭ್ಯಂಗ ಸ್ನಾನ ಎಂದು ಆಯುರ್ವೇದದಲ್ಲಿ ಕರೆಯುತ್ತಾರೆ.
BREAKING NEWS : ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ : ಎಫ್ಐಆರ್ ದಾಖಲು
ಎಣ್ಣೆ ಸ್ನಾನ ಮಾಡುವುದರಿಂದ ಮೈಗ್ರೈನ್, ಮಾನಸಿಕ ಖಿನ್ನತೆ, ಲೈಂಗಿಕ ನಿರಾಸಕ್ತಿ, ಜಠರದ ಅಸ್ವಸ್ಥತೆ ಮುಂತಾದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ. ಎಣ್ಣೆಸ್ನಾನ ದೇಹಕ್ಕೆ ತಂಪನ್ನು ಒದಗಿಸುತ್ತದೆ. ಕಣ್ಣುಗಳಿಗೆ ಮತ್ತು ದೇಹದ ಚರ್ಮದ ವಿಷಯದಲ್ಲಿ ಪರಿಣಾಮಕಾರಿಯಾಗಿಯೂ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಒರಟು ಚರ್ಮ, ಸೀಳು ಕೂದಲು, ತುಟಿ- ಮೈಚರ್ಮದ ಒರಟು, ಪಾದಗಳಲ್ಲಿ ಬಿರುಕು ಹೀಗೆ ಹಲವಾರು ಸಣ್ಣ ಸಣ್ಣ ತೊಂದರೆಗಳನ್ನು ಅಭ್ಯಂಜನ ನಿವಾರಿಸಬಲ್ಲದು.
ಅಭ್ಯಂಜನಕ್ಕೆ ಸೂಕ್ತವಾದ ಎಣ್ಣೆಗಳು
ಹರಳೆಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆಗಳು ಸೂಕ್ತವಾಗಿವೆ. ಇವುಗಳನ್ನು ಉಪಯೋಗಿಸಿಕೊಂಡು ಅಭ್ಯಂಜನ ಮಾಡಬಹುದು. ನಮ್ಮಲ್ಲಿ ಸಾಮಾನ್ಯವಾಗಿ ಎಳ್ಳೆಣ್ಣೆ ಮತ್ತು ಹರಳೆಣ್ಣೆ ಹೆಚ್ಚಾಗಿ ಬಳಸುತ್ತಾರೆ. ಇವು ಇತರೆ ಎಣ್ಣೆಗಳಿಗಿಂತ ಉತ್ತಮವಾಗಿವೆ.
ಎಣ್ಣೆ ಸ್ನಾನ ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಸೂಕ್ತ ಎಣ್ಣೆಯನ್ನು ತೆಗೆದುಕೊಂಡು. ತಲೆಯಿಂದ ಪಾದಗಳವರೆಗೆ ಅನುಲೋಮ ರೀತಿಯಲ್ಲಿ ಅಂದರೆ ಮೇಲಿನಿಂದ ಕೆಳಕ್ಕೆ ಬರುವ ರೀತಿಯಲ್ಲಿ ಹಚ್ಚಬೇಕು. ನಿಧಾನವಾಗಿ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. ಮುಖ, ಕಣ್ಣುಗಳು, ಮೂಗು, ಕಿವಿಗಳು, ಕಂಕುಳಿನ ಭಾಗ, ಹೊಟ್ಟೆಯ ಭಾಗ, ಸಂಧಿಗಳು, ಕಾಲುಗಳ ಭಾಗ, ಹೀಗೆ ಎಲ್ಲಾ ಕಡೆ ಹರಡುವಂತೆ ಚೆನ್ನಾಗಿ ಹಚ್ಚಬೇಕು.
BREAKING NEWS : ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ : ಎಫ್ಐಆರ್ ದಾಖಲು
ಹೀಗೆ ಸಂಪೂರ್ಣ ದೇಹ ಎಣ್ಣೆಯಿಂದ ಆವೃತವಾಗವಂತೆ ಗಮನವಹಿಸಿ. ನಂತರ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಚರ್ಮದ ರೋಮಗಳ ಬುಡಕ್ಕೆ ಎಣ್ಣೆ ಇಳಿಯುವಂತೆ ಎಣ್ಣೆ ಹಚ್ಚಬೇಕು. ಸುಮಾರು ಒಂದು ಗಂಟೆಗಳ ಕಾಲ ಹಾಗೆ ಬಿಡಿ. ದೇಹ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಉಗುರು ಬೆಚ್ಚಿಗಿನ ನೀರನ್ನು ಸಿದ್ಧ ಪಡಿಸಿಕೊಳ್ಳಿ, ಶೀಗೆಕಾಯಿ ಪುಡಿಯಿಂದ ಸ್ನಾನ ಮಾಡಿ ಹೀಗೆ ಮಾಡಿದರೆ ದೇಹದ ಮೇಲಿನ ಜಿಡ್ಡು ಹೋಗುತ್ತದೆ.
ಅಭ್ಯಂಜನಕ್ಕೆ ಸೂಕ್ತ ಸಮಯ ಯಾವುದು..?
ಬ್ರಾಹ್ಮೀ ಮೂಹೂರ್ತದಲ್ಲಿ ಅಂದರೆ 4.30ರಿಂದ 5.30ರ ವರೆಗೆ ಸೂಕ್ತ ಎನ್ನುತ್ತದೆ ಆಯುರ್ವೇದ. ಆಗಲಿಲ್ಲ ಎಂದರೆ ಚಿಂತೆ ಬೇಡ. ಮುಂಜಾನೆಯ ಎಳೆ ಬಿಸಿಲು ಮತ್ತು ಸಂಜೆಯ ಎಳೆಬಿಸಿಲಿನಲ್ಲಿ ಮಾಡಬಹುದು. ಈ ಸಮಯದಲ್ಲಿ ಎಣ್ಣೆ ಹಚ್ಚಿಕೊಂಡು ಸೂರ್ಯನ ಕಿರಣಗಳಿಗೆ ಮೈ ಒಡ್ಡಿದರೆ ಇನ್ನೂ ಹೆಚ್ಚು ಉಪಯೋಗ ಪಡೆಯಬಹುದು. ಆಯುರ್ವೇದದ ಪ್ರಕಾರ ಆಹಾರ ಸೇವಿದ ತಕ್ಷಣ ಅಭ್ಯಂಜನ ಮಾಡುವಂತಿಲ್ಲ ಆಹಾರ ಜೀರ್ಣವಾದ ಬಳಿಕವೇ ಈ ಕಾರ್ಯ ಮಾಡಬೇಕು ಈ ಬಗ್ಗೆ ಸ್ವಲ್ಪ ಗಮನವಹಿಸಿ ನೀವೇ ಪ್ಲಾನ್ ಮಾಡಿಕೊಳ್ಳಿ.
ಎಣ್ಣೆ ಮಜ್ಜನದಿಂದಾಗುವ ಪ್ರಯೋಜನಗಳು
ಎಣ್ಣೆ ಸ್ನಾನದಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ನಮ್ಮ ಆರೋಗ್ಯಕ್ಕೆ ಬಾಹ್ಯ ಚಟುವಟಿಕೆಗಳು ಬಹಳ ಮುಖ್ಯವಾಗಿವೆ ಅದರಲ್ಲಿ ಅಂಭ್ಯಜನವು ಒಂದು ವಿಶೇಷವಾದ ಕಾರ್ಯವಾಗಿದೆ.
BREAKING NEWS : ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ : ಎಫ್ಐಆರ್ ದಾಖಲು
ಎಣ್ಣೆ ಸ್ನಾನದಿಂದ ದೇಹದಲ್ಲಿ ಉದ್ಭಿಸುವ ಉಷ್ಣಾಂಶವನ್ನು ಹೊರಹಾಕುತ್ತದೆ. ಇದರಿಂದ ನಮ್ಮ ದೇಹದ ರಕ್ಷಾ ಕವಚ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.ಮೈಗ್ರೈನ್, ಮಾನಸಿಕ ಖಿನ್ನತೆ, ಲೈಂಗಿಕ ನಿರಾಸಕ್ತಿ, ಜಠರದ ಅಸ್ವಸ್ಥತೆ ಮುಂತಾದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.ಎಣ್ಣೆ ಮೈಮೇಲೆ ಉಜ್ಜುವುದರಿಂದ ಚರ್ಮದ ಮೇಲೆ ಸತ್ತ ಜೀವಕೋಶಗಳು ನಾಶವಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.ಒರಟು ಚರ್ಮ, ಸೀಳು ಕೂದಲು, ತುಟಿ- ಮೈಚರ್ಮದ ಒರಟು, ಪಾದಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.ಎಣ್ಣೆ ಸ್ನಾನದಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.
BREAKING NEWS : ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ : ಎಫ್ಐಆರ್ ದಾಖಲು
ಎಣ್ಣೆ ಕೂದಲಿನ ರೂಟ್ಗಳಿಗೆ ತಲುಪಿ ತಲೆ ಕೂದಲು ಬಲಗೊಳ್ಳುತ್ತದೆಕಣ್ಣುಗಳಲ್ಲಿ ಬಿದ್ದ ಕಸಕಡ್ಡಿಗಳನ್ನು ಹೊರ ಹಾಕುತ್ತದೆ ದೃಷ್ಠಿ ಉತ್ತಮಗೊಳ್ಳುತ್ತದೆ.ಎಣ್ಣೆ ಮಸಾಜ್ ನಿಂದ ದೇಹದ ನರಮಂಡಲದಲ್ಲಿ ರಕ್ತ ಚಲನೆ ವೇಗಗೊಳ್ಳುತ್ತದೆ.ನಿಶಕ್ತಿಯಿಂದ ಕೂಡಿರುವ ಮಾಸಂಖಂಡಗಳಿಗೆ ಪುನಶ್ವೇತನ ನೀಡಿ ಶಕ್ತಿ ಕೊಡುತ್ತದೆಮೈ, ಸೊಂಟ, ಸಂಧಿವಾತ ನಿವಾರಣೆಯಾಗುತ್ತದೆನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ.ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿವಾರಿಸಿ ಚೈತನ್ಯ ನೀಡುತ್ತದೆ.
BREAKING NEWS : ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ : ಎಫ್ಐಆರ್ ದಾಖಲು