ಕೊಪ್ಪಳ: ರಾಜ್ಯದಲ್ಲಿ ಧರ್ಮ ದಂಗಲ್ ಮಧ್ಯೆಯೇ ಹಿರೇಗೊಣ್ಣಾಗರ ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ಆಂಜನೇಯನಿಗೆ ಅಭಿಷೇಕ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ.
BIGG NEWS : ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಮೋದಿ, RSS ನಿಂದ ಮೊಸಳೆ ಕಣ್ಣೀರು : ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ತಮ್ಮ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಪೂಜೆ ಮಾಡಿದ್ದಾರೆ. ಇದನ್ನ ಕಂಡು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದ ಅಮೀನ್ ಸಾಬ್ ಎಂಬಾತನೇ ಭಾವೈಕತೆ ಸಂದೇಶ ಸಾರಿದ ವ್ಯಕ್ತಿ. ಅಮೀನ್ ಸಾಬ್ ತನ್ನ ಜಮೀನಿನಲ್ಲಿ ಆಂಜನೇಯ ವಿಗ್ರಹವಿಟ್ಟು ಅಭೀಷಕ ಮಾಡಿದ್ದಾರೆ. ಈ ಅಭೀಷಕದಲ್ಲಿ ಕೇವಲ ಆತ ಅಲ್ಲದೇ ಗ್ರಾಮದ ಹಿಂದೂ ಜನ ಕೂಡಾ ಭಾಗವಹಿಸಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಅಮಿನ್ ಸಾಬ್ ಜಮೀನಿನಲ್ಲಿ ಅವರ ಮುತ್ತಾತನ ಕಾಲದಿಂದಲೂ ಈ ಆಂಜನೇಯ ವಿಗ್ರಹವಿತ್ತಂತೆ. ಅಲ್ಲದೇ ಅಮಿನ್ ಸಾಬ್ ಕುಟುಂಬಸ್ಥರು ತಮ್ಮ ಜಮೀನಿನಲ್ಲಿಯೇ ವಾಯುಪುತ್ರನಿಗೆ ಕಟ್ಟೆ ಕಟ್ಟಿ ಪ್ರತಿ ವರ್ಷ ಸರಳವಾಗಿ ಪೂಜೆ ಸಲ್ಲಿಸುತ್ತಿದ್ದಾರಂತೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಅಮಿನ್ ಸಾಬ್ ಕುಟುಂಬಸ್ಥರು ಆಂಜನೇಯನಿಗೆ ಪೂಜೆ ಸಲ್ಲಿಸೋದನ್ನ ನಿಲ್ಲಿಸಿದ್ದರಂತೆ.