ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾದ ಖಾಸಗಿ ಶಾಲೆಯೊಂದು 2ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆಗೆ ಬಳಸಲಾಗುತ್ತಿರುವ ಪುಸ್ತಕ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ಸಮಸ್ಯೆಯು ಪುಸ್ತಕದಲ್ಲಿ ಉರ್ದು ಭಾಷೆಯ ಪದಗಳು ಮತ್ತು ಹೆಸರುಗಳ ಬಳಕೆಗೆ ಸಂಬಂಧಿಸಿದೆ. ಈ ಪುಸ್ತಕವನ್ನು ಬಹುಪಾಲು ಮುಸ್ಲಿಮೇತರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಅಮ್ಮಿ (ತಾಯಿ) ಮತ್ತು ಅಬ್ಬು (ತಂದೆ) ನಂತಹ ಸಾಮಾನ್ಯ ಉಲ್ಲೇಖಗಳನ್ನು ಹೊರತುಪಡಿಸಿ ಪುಸ್ತಕದಲ್ಲಿ ಕಥಾ ಪಾತ್ರಗಳಿಗೆ ಶಾನು, ಸಾನಿಯಾ, ಶಿರೀನ್, ಅಮೀರ್ ಮತ್ತು ನಸೀಮ್ ಮುಂತಾದ ಮುಸ್ಲಿಂ ಹೆಸರುಗಳನ್ನು ಬಳಸಲಾಗಿದೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮನೆಯಲ್ಲಿಯೂ ಅಬ್ಬು, ಅಮ್ಮಿ ಎಂಬ ಪದಗಳನ್ನು ಬಳಸಲಾರಂಭಿಸಿದ್ದು, ಬಿರಿಯಾನಿ ತಿನ್ನಲು ಬೇಡಿಕೆ ಇಡುತ್ತಿದ್ದಾರೆ ಎಂದು ಪಾಲಕರು ದೂರಿದ್ದಾರೆ.
ʻಗುಲ್ಮೊಹರ್ʼ ಹೆಸರಿನ ಈ ಪುಸ್ತಕವನ್ನು ಹೈದರಾಬಾದ್ ಮೂಲದ ಪ್ರಕಾಶಕರು ತಯಾರಿಸಿದ್ದಾರೆ. ಈ ಪುಸ್ತಕವು 113 ಪುಟಗಳನ್ನು ಹೊಂದಿದ್ದು ಇದರ ಬೆಲೆ 352 ರೂ. ಇದೆ. ಪುಸ್ತಕದ ಬಗ್ಗೆ ಪೋಷಕರು ಸ್ಥಳೀಯ ಬಜರಂಗದಳ ಪ್ರತಿನಿಧಿಗಳಿಗೆ ದೂರು ನೀಡಿದ್ದು, ಅವರು ರಾಜ್ಯ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.
ಈ ಪುಸ್ತಕವನ್ನು ಶಾಲಾ ಶಿಕ್ಷಣದ ಇಸ್ಲಾಮೀಕರಣದ ಪ್ರಯತ್ನ ಎಂದು ಹೆಸರಿಸಲಾಗಿದೆ. ಅಬ್ಬು ಮತ್ತು ಅಮ್ಮಿ ಮತ್ತು ಬಿರಿಯಾನಿ ಬಗ್ಗೆ ಮಾತನಾಡುವ ಅಧ್ಯಾಯವನ್ನು ತಮ್ಮ ಮಕ್ಕಳಿಗೆ ಬಲವಂತವಾಗಿ ಕಲಿಸಲಾಗುತ್ತಿದೆ. ಹಿಂದೂ ಮಕ್ಕಳ ಪೋಷಕರು ತಮ್ಮ ಮಕ್ಕಳು ಮತ್ತು ಹಿಂದೂ ಸಂಸ್ಕೃತಿಯ ನಡುವೆ ಅಂತರವನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.
BREAKING NEWS: ಮಾನ್ಸೂನ್ ಅಧಿವೇಶನಕ್ಕೂ ಮುನ್ನ ಸಂಸತ್ತಿನಲ್ಲಿ ಧರಣಿ ಮಾಡುವಂತಿಲ್ಲ: ಪಿಸಿ ಮೋದಿ ಆದೇಶ
Breaking news: ಬಹುಭಾಷಾ ನಟ ʻಪ್ರತಾಪ್ ಪೋಥೆನ್ʼ ಚೆನ್ನೈನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆ