Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video: ಕ್ರಿಕೆಟ್ ಇತಿಹಾಸದ ವಿವಾದಾತ್ಮಕ ರನೌಟ್: ಚೆಂಡಿಲ್ಲದ ಕೈಯಿಂದ ಸ್ಟಂಪ್ ಹಾರಿಸಿದರೂ ಔಟ್ ಕೊಟ್ಟಿದ್ದೇಗೆ?

03/02/2026 8:41 AM

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM

‘ನನ್ನ ಮಗನನ್ನು ‘ಜಿನ್’ಗಳು ಎತ್ತಿಕೊಂಡು ಹೋದವು’: ಪಾಕಿಸ್ತಾನದಲ್ಲಿ ದೆವ್ವಗಳ ವಿರುದ್ಧವೇ FIR ದಾಖಲಿಸಿದ ತಂದೆ!

03/02/2026 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಸಕ ಎನ್.ಎ ಹ್ಯಾರಿಸ್ ಕೂಡಲೇ ಬಂಧಿಸುವಂತೆ ಎಎಪಿ ಆಗ್ರಹ
KARNATAKA

ಶಾಸಕ ಎನ್.ಎ ಹ್ಯಾರಿಸ್ ಕೂಡಲೇ ಬಂಧಿಸುವಂತೆ ಎಎಪಿ ಆಗ್ರಹ

By kannadanewsnow0919/05/2025 2:46 PM

ಬೆಂಗಳೂರು: ನಿನ್ನೆ ನಗರದ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡ ಶಿವಕುಮಾರ್, ನಾಯ್ಡು ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ .ಹ್ಯಾರಿಸ್ , ಸ್ಥಳೀಯ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ರೆಡ್ಡಿ ಹಾಗೂ ಇನ್ನಿತರ ಗೂಂಡಾಗಳನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಶಾಸಕರ ವಾರ್ಡ್ ಭೇಟಿ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಶಿವಕುಮಾರ್ ನಾಯ್ಡು ರವರ ಮೇಲೆ ಏಕಾಏಕಿ ಸ್ವತಹ ಶಾಸಕರೇ ಈ ರೀತಿಯ ಹಲ್ಲೆಯನ್ನು ನಡೆಸಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಶಾಸಕರು ತಮ್ಮ ಹಾಗೂ ತಮ್ಮ ಮಗನ ಗೂಂಡಾ ವರ್ತನೆಗಳ ಮೂಲಕ ಶಾಂತಿನಗರ ರಿಪಬ್ಲಿಕ್ ನ್ನು ಮಾಡಲು ಪಕ್ಷವು ಎಂದಿಗೂ ಬಿಡುವುದಿಲ್ಲ. ಈಗಾಗಲೇ ಈ ಗೂಂಡಾ ಶಾಸಕರ ವಿರುದ್ಧ ನಾವು ಸಾಕಷ್ಟು ಹೋರಾಟವನ್ನು ಮಾಡಿದ್ದೇವೆ ಹಾಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸೀತಾರಾಮ ಗುಂಡಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ “ನಮ್ಮ ಪಕ್ಷದ ಮುಖಂಡ ಶಿವಕುಮಾರ್ ನಾಯ್ಡು ಇತ್ತೀಚೆಗೆ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಫುಟ್ಪಾತ್ ಅನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಬೃಹತ್ ಬಿಲ್ಡರ್ ರೊಬ್ಬರ ಹಗರಣವನ್ನು ಬಯಲಿಗಳಿದಿದ್ದರು. ಈ ರೀತಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಶಾಸಕರ ಹಾಗೂ ಅವರ ಕಡೆ ಗುಂಡಾಗಳು ಕಳೆದ ಹಲವು ದಿವಸಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಪಕ್ಷವನ್ನು ಬೆಳೆಸುತ್ತಿದ್ದ ಶಿವಕುಮಾರ್ ನಾಯ್ಡು ರವರ ಮೇಲೆ ಸಾಕಷ್ಟು ಒತ್ತಡಗಳು ಹಾಗೂ ಬೆದರಿಕೆಯನ್ನು ಹಾಕುತ್ತಿದ್ದರು.

ಈಗ ಶಾಸಕರೇ ನೇರವಾಗಿ ಹಲ್ಲೆ ನಡೆಸಿರುವುದು ಶಾಂತಿಪ್ರಿಯ ಶಾಂತಿನಗರ ಮತದಾರರುಗಳಿಗೆ ಮಾಡಿರುವ ದ್ರೋಹ. ಈ ದುರ್ಘಟನೆ ನಡೆದು 20 ಗಂಟೆಗಳ ಆದರೂ ಸಹ ಪೊಲೀಸರು ಎಫ್ಐಆರ್ ಹಾಕದಿರಲು ಶಾಸಕ ಹ್ಯಾರಿಸ್ ತೀವ್ರ ಒತ್ತಡವನ್ನು ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರ ಬಳಿಯೂ ಸಹ ದೂರನ್ನು ಸಲ್ಲಿಸಿದ್ದೇವೆ. ಈ ಶಾಸಕರ ವಿರುದ್ಧ ಕೂಡಲೇ ದೂರನ್ನು ದಾಖಲಿಸಿ ಕೂಡಲೇ ಬಂದಿಸಿ ವಿಚಾರಣೆಗೊಳ ಪಡಿಸಬೇಕು ಹಾಗೂ ಶಿವಕುಮಾರ್ ನಾಯ್ಡುರವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ” ಎಂದು ಅಗ್ರಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಪ್ರಕಾಶ್ ನೆಡುಂಗದಿ, ಹರಿಹರನ್ ,ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ದೇವರಸಂ ಸೇರಿದಂತೆ ಇನ್ನಿತರ ನಾಯಕರುಗಳು ಭಾಗವಹಿಸಿದ್ದರು.

BREAKING: ಸಂಭಾಲ್ ಮಸೀದಿ ವಿವಾದ: ASI ಸರ್ವೆ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಅರ್ಜಿ ಹೈಕೋರ್ಟ್ ವಜಾ | Sambhal Masjid Row

ಸಾರ್ವಜನಿಕರೇ ಗಮನಿಸಿ : ನಿಮ್ಮ `ಮೊಬೈಲ್’ ಕಳ್ಳತನವಾದ್ರೆ ಚಿಂತೆಬೇಡ, ಜಸ್ಟ್ ಈ ರೀತಿ ಮಾಡಿ.!

Share. Facebook Twitter LinkedIn WhatsApp Email

Related Posts

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM1 Min Read

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM1 Min Read

ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಕೇಸ್ : ಪ್ರಮುಖ ಆರೋಪಿ ಕಿಶೋರ ಸಾಳ್ವೆ ‘SIT’ ಕಸ್ಟಡಿ ಅಂತ್ಯ

03/02/2026 7:33 AM1 Min Read
Recent News

Watch video: ಕ್ರಿಕೆಟ್ ಇತಿಹಾಸದ ವಿವಾದಾತ್ಮಕ ರನೌಟ್: ಚೆಂಡಿಲ್ಲದ ಕೈಯಿಂದ ಸ್ಟಂಪ್ ಹಾರಿಸಿದರೂ ಔಟ್ ಕೊಟ್ಟಿದ್ದೇಗೆ?

03/02/2026 8:41 AM

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

03/02/2026 8:41 AM

‘ನನ್ನ ಮಗನನ್ನು ‘ಜಿನ್’ಗಳು ಎತ್ತಿಕೊಂಡು ಹೋದವು’: ಪಾಕಿಸ್ತಾನದಲ್ಲಿ ದೆವ್ವಗಳ ವಿರುದ್ಧವೇ FIR ದಾಖಲಿಸಿದ ತಂದೆ!

03/02/2026 8:26 AM

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM
State News
KARNATAKA

ದಾವಣಗೆರೆ : ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಚಾಲಕ ದುರ್ಮರಣ

By kannadanewsnow0503/02/2026 8:41 AM KARNATAKA 1 Min Read

ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು , ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಚಾಲಕ ಸಾವನ್ನಪ್ಪಿರುವ…

BREAKING : ರಾಜ್ಯದ ಸರ್ಕಾರಿ ಬಸ್ ಗಳ ಮೇಲೆ ಗುಟ್ಕಾ, ಪಾನ್ ಮಸಾಲ ಜಾಹೀರಾತು ಪ್ರಕಟಿಸದಂತೆ ಸರ್ಕಾರ ಆದೇಶ

03/02/2026 8:24 AM

ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಕೇಸ್ : ಪ್ರಮುಖ ಆರೋಪಿ ಕಿಶೋರ ಸಾಳ್ವೆ ‘SIT’ ಕಸ್ಟಡಿ ಅಂತ್ಯ

03/02/2026 7:33 AM

BREAKING : ಬೆಂಗಳೂರಲ್ಲಿ ಘೋರ ದುರಂತ : ಪಾರ್ಟಿ ಬಳಿಕ ಪಾಲಕರಿಗೆ ಹೆದರಿ ಕಟ್ಟಡದಿಂದ ಜಿಗಿದು ಬಾಲಕ ಸಾವು!

03/02/2026 7:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.