ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ದೆಹಲಿ ಶಾಸಕರಲ್ಲಿ ನಾಲ್ವರು ಶಾಸಕರನ್ನು ಸಂಪರ್ಕಿಸಿ ಕೇಸರಿ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದೆ ಇಲ್ಲದಿದ್ದರೆ “ಸುಳ್ಳು ಪ್ರಕರಣಗಳಲ್ಲಿ , ನೀವು ಸಿಬಿಐ ಮತ್ತು ಇಡಿ” ಎದುರಿಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ಹೇಳಿಕೊಂಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಅಂತ ಆರೋಪಿಸಿದರು.
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಇದು “ಅತ್ಯಂತ ಗಂಭೀರ ವಿಷಯ” ಮತ್ತು “ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಮುಂದಿನ ಕಾರ್ಯತಂತ್ರವನ್ನು ರೂಪಿಸಲು” ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ (ಪಿಎಸಿ) ಸಭೆಯನ್ನು ಸಂಜೆ 4 ಗಂಟೆಗೆ ನಿವಾಸದಲ್ಲಿ ಕರೆಯಲಾಗಿದೆ ಎಂದು ಹೇಳಿದ್ದಾರೆ.
एक तरफ़ @ArvindKejriwal जी हैं जो India को नंबर 1 बनाना चाहते है और दूसरी तरफ मोदी जी है जो राज्यो को आपस मे लड़ाना चाहते है। ED- CBI का इस्तेमाल करके सरकारों को गिराना चाहते है। पूंजीपतियों का कर्जा माफ कराना चाहते है। pic.twitter.com/s6kY5pvtQk
— Sanjay Singh AAP (@SanjayAzadSln) August 24, 2022