ನವದೆಹಲಿ: ಅಫ್ತಾಬ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಕರ್ನನ್ನು ಕೊಂದು, ಆಕೆಯ ಮೃತದೇಹವನ್ನು ತುಂಡರಿಸಲು 5 ಚಾಕುಗಳಳು ಮತ್ತು ಗರಗಸವನ್ನು ಬಳಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.
ದೇಹವನ್ನು ತುಂಡರಿಸಲು ಬಳಸಿದ್ದ ಐದು ಚಾಕುಗಳು ಪತ್ತೆಯಾಗಿವೆ. ಆದ್ರೆ, ಗರಗಸ ಇನ್ನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ.
ದೇಶವನ್ನು ಬೆಚ್ಚಿಬೀಳಿಸಿದ ಭೀಕರ ಹತ್ಯೆಯ ಮಾಹಿತಿ ಬಹಿರಂಗಪಡಿಸುವಿಕೆ ಪ್ರಯತ್ನ ಮುಂದುವರೆದಿದೆ. ಈ ವೇಳೆ, ತಲಾ 5-6 ಇಂಚು ಉದ್ದದ ಐದು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ತನ್ನ ಗೆಳತಿ ಶ್ರದ್ಧಾ ವಾಕರ್ಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಮೂರು ವಾರಗಳ ಕಾಲ 300-ಲೀಟರ್ ಫ್ರಿಡ್ಜ್ನಲ್ಲಿಟ್ಟು ನಗರದಾದ್ಯಂತ ಎಸೆದಿದ್ದಾನೆ. ಈ ಪ್ರಕರಣ ದೇಶವನೇ ಬೆಚ್ಚಿಬೀಳಿಸಿದೆ. ಇದೀಗ ಆರೋಪಿ ಪೊಲೀಸರ ವಶದಲ್ಲಿದ್ದಾನೆ.
ಚಳಿಗಾಲದಲ್ಲಿ ʻಸೌತೆಕಾಯಿʼಯನ್ನು ತಿನ್ನಬಹುದೇ? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ! | Cucumber
ಚಂದ್ರನ ಮೇಲ್ಮೈಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ನಾಸಾದ ʻಆರ್ಟೆಮಿಸ್ Iʼ
BIG NEWS: ಯುವಕನಿಗೆ ಗುಂಡಿಕ್ಕಿ ಹತ್ಯೆ: ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ, 48 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತ
ಚಳಿಗಾಲದಲ್ಲಿ ʻಸೌತೆಕಾಯಿʼಯನ್ನು ತಿನ್ನಬಹುದೇ? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ! | Cucumber