ಶಿವಮೊಗ್ಗ: ರಾಜ್ಯದಲ್ಲಿ ಅವೈಜ್ಞಾನಿಕ ಹಂಪ್ ಗೆ ಬಲಿ ಎನ್ನುವಂತೆ ಶಿವಮೊಗ್ಗದಲ್ಲಿ ಪಾಲಿಕೆ ನಿರ್ಮಿಸಿದ್ದಂತ ಅವೈಜ್ಞಾನಿಕ ಹಂಪ್ ಗೆ ಯುವಕನೊಬ್ಬ ಬಲಿಯಾಗಿದ್ದಾನೆ.
ಶಿವಮೊಗ್ಗದ ಎಲ್ ಬಿ ಎಸ್ ನಗರದ ಫ್ಲೈಓವರ್ ಬಳಿಯಲ್ಲಿ ಪಾಲಿಕೆಯಿಂದ ಅವೈಜ್ಞಾನಿಕವಾಗಿ ಹಂಪ್ ಒಂದನ್ನು ನಿರ್ಮಿಸಲಾಗಿತ್ತು. ಈ ಹಂಬ್ ಕಾಣದೇ ಉಲ್ಲಾ(35) ಎಂಬಾತ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅವೈಜ್ಞಾನಿಕ ಹಂಪ್ ಕಾಣದೇ ಉಲ್ಲಾ ಬೈಕ್ ನಿಂದ ಕೆಳಗೆ ಬಿದ್ದಿರುವಂತ ದೃಶ್ಯ ಸಮೀಪದಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಲ್ಲಾ ಸಾವಿಗೆ ಶಿವಮೊಗ್ಗ ಪಾಲಿಕೆಯೇ ಕಾರಣ ಎಂಬುದಾಗಿ ಆರೋಪಿಸಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ: ಚಿಕ್ಕಮಗಳೂರಲ್ಲಿ ಕೂಲಿ ಕಾರ್ಮಿಕ ಸಾವು








