ಬೆಂಗಳೂರು: ಗಂಡನನ್ನೇ ಮಕ್ಕಳೆದುರೇ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರನನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಹೆಂಡತಿ ಅನಿತಾ ಮಕ್ಕಳಿಗೆ ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿ ಹೃದಯಾಘಾತ ಎಂದು ಹೇಳಿದ್ದಾಳೆ. ತಮ್ಮ ಪೋಷಕರೂ ಅನಿತಾ ಮಾತನ್ನು ನಂಬಿದ್ದರು.ಅನಿತಾ 6 ತಿಂಗಳ ಬಳಿ ಮಕ್ಕಳನ್ನ ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಎಸ್ಕೇಪ್ ಆಗಿದ್ದಳು. ಇದರಿಂದ ಮಕ್ಕಳು ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರು.
BIGG NEWS: ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸ್ಥಳ ಪರಿಶೀಲನೆ
ಈ ವೇಳೆ ಮೊಮ್ಮಕ್ಕಳು ಅಜ್ಜಿಯೊಂದಿಗೆ ಅನಿತಾ ಕೊಲೆ ಮಾಡಿರುವ ವಿಚಾರ ಹೇಳಿದ್ದರು. ಇದು ಗೊತ್ತಾದ ಕೂಡಲೇ ಅನಿತಾ ಪೋಷಕರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.ಮಕ್ಕಳ ಹೇಳಿಕೆ ಆಧಾರದ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಅನಿತಾ ಹಾಗೂ ಪ್ರಿಯಕರ ರಾಕೇಶ್ನನ್ನ ಬಂಧಿಸಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.