ಬಾಗಲಕೋಟೆ: ಮಕರ ಸಂಕ್ರಾಂತಿಯಂದೇ ರಾಜ್ಯದಲ್ಲಿ ಘೋರ ದುರಂತ ಸಂಭವಿಸಿದೆ. ಮಕರ ಸಂಕ್ರಾಂತಿಯ ಪ್ರಯುಕ್ತ ಕೊಳದಲ್ಲಿ ಸ್ನಾನಕ್ಕೆ ಹೋಗಿದ್ದಂತ ಇಬ್ಬರು ಮಕ್ಕಳು ನೀರಲ್ಲಿ ತಂದೆಯ ಎದುರೇ ಮುಳುಗಿ ಸಾವನ್ನಪ್ಪಿರುವಂತ ಘಟನೆ ಬಾಗಲಕೋಟೆಯ ಜಾಲಿಕಟ್ಟೆಯಲ್ಲಿ ನಡೆದಿದೆ.
ಬಾಗಲಕೋಟೆ ತಾಲ್ಲೂಕಿನ ಜಾಲಿಕಟ್ಟೆ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಸ್ನಾನಕ್ಕೆ ಮನೋಜ್(17) ಹಾಗೂ ಪ್ರಮೋದ್ ಬಡಿಗೇರ(17) ಇಳಿದಿದ್ದರು. ಆದರೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರಿಬ್ಬರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇದೇ ವೇಳೆ ಮತ್ತೋರ್ವ ನೀರಲ್ಲಿ ಮುಳುಗುತಿದ್ದವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇದೀಗ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಳೇ ವೈಷಮ್ಯಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ
ರಾಜ್ಯ ರಾಜಕಾರಕ್ಕೆ ಬರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ








