ಕಲಬುರ್ಗಿ : ಕಲ್ಬುರ್ಗಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಭೀಮಾ ನದಿ ದಡದಲ್ಲಿ ಕಾಲು ಜಾರಿ ಬಿದ್ದು ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಹಜಾಲ ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ.
ನವರಾತ್ರಿ ಹಬ್ಬ ಹಿನೆಲೆಯಲ್ಲಿ ಯುವಕ ಭಾಗೇಶ ನದಿಯ ದಡದಲ್ಲಿ ಬೇಡಶೀಟ್ ತೊಳೆಯುತ್ತಿದ್ದ ಈ ವೇಳೆ ಕಾಲು ಜಾರಿ ನದಿಗೆ ಬಿದ್ದು ಬಾಗೇಶ್ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಅಫ್ಜಲಪುರ ಪೊಲೀಸ್ರು ಭೇಟಿ ನೀಡಿದ್ದಾರೆ ಘಟನೆ ಕುರಿತಂತೆ ಅಫ್ಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.