ಪೂರ್ವ ಗೋದಾವರಿ : ದೇವರು ಚಮತ್ಕಾರಗಳ ಮಾಡುವ ಮೂಲಕ ತನ್ನ ಇರುವಿಕೆಯನ್ನ ಸಾರುತ್ತಾನೆ ಅನ್ನೋ ಮಾತಿದೆ. ಅದಕ್ಕೆ ಉದಾಹರಣೆಗಳೆಂದರೆ ಗಣೇಶ ಹಾಲು ಕುಡಿಯುವುದು, ಹಾವು ಶಿವನನ್ನ ಪೂಜಿಸುವುದು, ಗೋವು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವುದು. ಅಂತೆಯೇ ಪವಿತ್ರ ಕಾರ್ತಿಕ ಮಾಸದಲ್ಲಿ ಜಂಟಿ ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಜಿಲ್ಲೆಯ ಕಡಿಯಂ ಮಂಡಲದ ಕಡಿಯಾಪುಲಂಕ ಚಿಂತಾದಲ್ಲಿರುವ ದೇವಾಲಯದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವು ಕಣ್ತೆರೆದಿದೆ. ಸಾಮಾನ್ಯವಾಗಿ ದೇವರ ವಿಗ್ರಹಗಳು ಕಣ್ಣು ಮುಚ್ಚಿ ಅರ್ಧ ತೆರೆದಂತೆ ಕಾಣುತ್ತವೆ. ಆದ್ರೆ, ನವೆಂಬರ್ 21 ಕೊನೆಯ ಕಾರ್ತಿಕ ಸೋಮವಾರವಾದ್ದರಿಂದ ಭಕ್ತರು ದೇವಸ್ಥಾನಗಳಿಗೆ ಹರಿದು ಬಂದಿದೆ. ಈ ಅನುಕ್ರಮದಲ್ಲಿ ಕಡಿಯಾಪುಲಂಕದಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಮಹಾಲಕ್ಷ್ಮಿ ದೇವಿ ಕಣ್ಣು ತೆರೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಈ ಸುದ್ದಿ ಕಾಳ್ಗಿಚ್ಚಿನಂತೆ ಆ ಪ್ರದೇಶದಲ್ಲಿ ಹಬ್ಬಿದ್ದು, ಪವಾಡ ನೋಡಲು ಭಕ್ತರು ಮುಗಿಬಿದ್ದರು. ಕಣ್ಣು ತೆರೆದ ಲಕ್ಷ್ಮಿ ದೇವಿಯನ್ನ ಕಣ್ತುಂಬಿಕೊಳ್ಳಲು ಭಕ್ತರು ಸ್ಥಳಕ್ಕೆ ಬರುತ್ತಿದ್ದಾರೆ. ಇನ್ನು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಣ್ಣು ತೆರೆದ ಲಕ್ಷ್ಮಿದೇವಿ, ವೈರಲ್ ವಿಡಿಯೋ ಇಲ್ಲಿದೆ.!
https://www.facebook.com/watch/?v=700197964630682
BREAKING NEWS : ಮೇಘಾಲಯ ಗಡಿಯಲ್ಲಿ ಪೊಲೀಸ್-ಸ್ಥಳೀಯರ ನಡುವೆ ಘರ್ಷಣೆ ; 6 ಜನ ಸಾವು, ಇಂಟರ್ನೆಟ್ ಸೇವೆ ಸ್ಥಗಿತ
BREAKING NEWS: ಮಂಡ್ಯದಲ್ಲಿ ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ
BIGG NEWS : ಗದಗದ ಲಕ್ಷ್ಮೇಶ್ವರದಲ್ಲಿ’ ಡಿ. 4 ರಂದು ಪಂಚಮಸಾಲಿ ಸಮಾವೇಶ’ : ವಚನಾನಂದ ಶ್ರೀಗಳು