ಬೆಂಗಳೂರು : ದಿವಂಗತ ದೇವರಾಜ್ ಅರಸು ಅವರ ಬಳಿಕ ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಕಳೆದ ಜನವರಿ 7ರಂದು ದೇವರಾಜ್ ಅರಸು ಅವರ ದಾಖಲೆಯನ್ನು ಮುರಿದು ಹೊಸ ದಾಖಲೆ ಸಹ ಬರೆದಿದ್ದಾರೆ.
ಅಷ್ಟೆ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಹಲವು ಹೆಸರಿನಿಂದ ಕರೆಯುತ್ತಾರೆ. ಕ್ಷೀರ ಭಾಗ್ಯ ಜಾರಿ ಮಾಡಿದಾಗ ಕ್ಷೀರ ರಾಮಯ್ಯ, ಅಕ್ಷರರಾಮಯ್ಯ ಹಾಗೂ ಟಗರು ಸಿದ್ದರಾಮಯ್ಯ ಎಂತಲ್ಲ ಸಿಎಂ ಸಿದ್ದರಾಮಯ್ಯ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಮೇಕಪ್ ಆರ್ಟಿಸ್ಟ್ ಒಬ್ಬ ಸಿಎಂ ಸಿದ್ದರಾಮಯ್ಯ ಅವರ ಪ್ರತಿರೂಪವನ್ನು ಪ್ರಾಸ್ತಟಿಕ್ ಸಿಲಿಕಾನ್ ಹ್ಯಾಂಡ್ ನಲ್ಲಿ ರೆಡಿ ಮಾಡಿದ್ದಾನೆ. ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ.
ಇನ್ಸ್ಟಾಗ್ರಾಮ್ ನಲ್ಲಿ siddu.makeup ಎಂಬ ಕಲಾವಿದನ ಖಾತೆಯಲ್ಲಿ ಈ ಒಂದು ಸಿಎಂ ಸಿದ್ದರಾಮಯ್ಯ ಅವರ ಸ್ಟ್ಯಾಚು ಮಾಡಿ ವಿಡಿಯೋ ಹರಿಬಿಟ್ಟಿದ್ದಾನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಒಂದು ಸ್ಟ್ಯಾಚು ಭಾರಿ ವೈರಲ್ ಆಗುತ್ತಿದೆ.








