ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಲಾಂಗ್ಜಂಪ್ ಫೈನಲ್ನಲ್ಲಿ ಮುರಳಿ ಶಂಕರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇದಕ್ಕೆ ಪ್ರಧಾನಿ ಮೋದಿಯವರು ವಿಶೇಷ ಗೆಲುವು ಎಂದು ಶ್ಲಾಘಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಶಂಕರ್ ಬೆಳ್ಳಿ ಪದಕ ಗೆದ್ದಿರುವುದು ವಿಶೇಷವಾಗಿದೆ. ದಶಕಗಳ ನಂತರ ಭಾರತ ಸಿಡಬ್ಲ್ಯೂಜಿ ಪುರುಷರ ಲಾಂಗ್ ಜಂಪ್ನಲ್ಲಿ ಪದಕ ಗೆದ್ದಿದೆ. ಅವರ ಸಾಧನೆ ಭಾರತೀಯ ಅಥ್ಲೆಟಿಕ್ಸ್ನ ಭವಿಷ್ಯಕ್ಕೆ ಉತ್ತಮವಾಗಿದೆ. ಅವರಿಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
M. Sreeshankar's Silver medal at the CWG is a special one. It is after decades that India has won a medal in Men’s long jump at the CWG. His performance augurs well for the future of Indian athletics. Congratulations to him. May he keep excelling in the times to come. pic.twitter.com/q6HO39JHy8
— Narendra Modi (@narendramodi) August 5, 2022
ಶಂಕರ್ ಅವರು 8.08 ಮೀಟರ್ಗಳ ಅಂತರದೊಂದಿಗೆ ಐತಿಹಾಸಿಕ ಬೆಳ್ಳಿ ಗೆಲುವು ಸಾಧಿಸಿದರು, ಇದು ಲಾಂಗ್ ಜಂಪ್ನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷ ಕ್ರೀಡಾಪಟುವಾಗಿದ್ದಾರೆ.
2022 ರ ಬರ್ಮಿಂಗ್ಹ್ಯಾಮ್ನಲ್ಲಿ ಬಹಾಮಾಸ್ನ ಲಕ್ವಾನ್ ನೈರ್ನ್ ಚಿನ್ನ ಗೆದ್ದರೆ, ದಕ್ಷಿಣ ಆಫ್ರಿಕಾದ ಜೊವಾನ್ ವ್ಯಾನ್ ವುರೆನ್ ಕಂಚಿನ ಪದಕವನ್ನು ಪಡೆದರು.