ಕೆಎನ್ಎನ್ಡಿಜಿಟಲ್ ಡೆಸ್ಕ್ : ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ.? ಹಾಗಿದ್ರೆ, ನಿಮಗೆ ಇದು ಒಳ್ಳೆಯ ಸುದ್ದಿಯಾಗಲಿದೆ. ಕಚ್ಚಾ ತೈಲ ದರ ಕುಸಿಯುತ್ತಿದ್ದು, ಇದು ಬಂಗಾರ ಪ್ರಿಯರಿಗೆ ಸಮಾಧಾನ ತಂದಿದೆ ಎನ್ನಬಹುದು. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗ್ತಿದೆ.
ಕಳೆದ ನಾಲ್ಕು ದಿನಗಳಿಂದ ಕಚ್ಚಾ ತೈಲ ದರ ಗಣನೀಯವಾಗಿ ಕುಸಿದಿದೆ. ಮದುವೆ ಸೀಸನ್’ನಲ್ಲಿ ಚಿನ್ನ ಖರೀದಿಸಲು ಮುಂದಾಗಿರುವವರಿಗೆ ಇದು ಸಮಾಧಾನಕರ ಅಂಶ ಎಂದೇ ಹೇಳಬಹುದು. ಈ ಅವಧಿಯಲ್ಲಿ ಚಿನ್ನದ ದರ 700 ರೂಪಾಯಿಗೂ ಹೆಚ್ಚು ಕುಸಿದಿದೆ.
ಅದ್ರಂತೆ, ಕಳೆದ ನಾಲ್ಕು ದಿನಗಳಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನ ಗಮನಿಸಿದ್ರೆ, 770 ರೂಪಾಯಿಯಷ್ಟು ಕುಸಿದಿದೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಈ ದರ ಅನ್ವಯಿಸುತ್ತದೆ. ಮೂರು ಪಟ್ಟು ಚಿನ್ನದ ಬೆಲೆ 300ಕ್ಕೂ ಹೆಚ್ಚು ಕುಸಿದಿವೆ. ಅದ್ರಂತೆ, ಈಗ ಈ ಚಿನ್ನದ ದರ 54,110 ರೂಪಾಯಿ ಆಗಿದೆ.
ಅಲ್ಲದೇ, 22 ಕ್ಯಾರೆಟ್ ಚಿನ್ನದ ದರಕ್ಕೆ ಬಂದಾಗ ಅದು ಅಲಂಕಾರಿಕ ಚಿನ್ನವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಈ ಚಿನ್ನದ ದರ ರೂ. 700 ಕುಸಿದಿದೆ. ಪ್ರಸ್ತುತ ಹತ್ತು ಗ್ರಾಂಗೆ ಚಿನ್ನದ ದರ 49,600 ಆಗಿದೆ.
ಇನ್ನು ಬೆಳ್ಳಿಯ ದರದ ವಿಚಾರಕ್ಕೆ ಬಂದ್ರೆ, ಕಳೆದ ನಾಲ್ಕು ದಿನಗಳಲ್ಲಿ ಬೆಳ್ಳಿಯ ಬೆಲೆ ಎರಡು ಬಾರಿ ಏರಿಕೆಯಾಗಿದೆ. ಅದು ಇನ್ನೂ ಎರಡು ಬಾರಿ ಇಳಿಕೆಯಾಗಿದೆ. ಆದರೆ, ಒಟ್ಟಾರೆ ಈ ನಾಲ್ಕು ದಿನಗಳಲ್ಲಿ ಬೆಳ್ಳಿ ದರ 900 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದು ನೆಮ್ಮದಿಯ ಅಂಶ ಎಂದೇ ಹೇಳಬಹುದು. ಈಗ ಪ್ರತಿ ಕೆಜಿ ಬೆಳ್ಳಿ ದರ 73,100 ರೂಪಾಯಿ ಇದೆ.
BIGG NEWS : ವಿಧಾನ ಪರಿಷತ್ ಸಭಾಪತಿ ಚುನಾವಣೆ : ಇಂದು ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ
BIGG NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಅಕ್ರಮ ತಡೆಗೆ `ಮೇರಾ ರೇಷನ್’ ಆ್ಯಪ್ ಅಭಿವೃದ್ಧಿ