ಬಳ್ಳಾರಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮಹಿಳೆಯೊಬ್ಬರು ಲೈವ್ ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯಲ್ಲಿ ವೀಡಿಯೋ ಮಾಡುತ್ತಲೇ ಮಹಿಳೆಯೊಬ್ಬರು ಲೈವ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳ್ಳಾರಿಯ ಹುಸೇನ್ ನಗರದಲ್ಲಿ ಮುನ್ನಿ(23) ಎಂಬುವರೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದಂತ ಮಹಿಳೆಯಾಗಿದ್ದಾರೆ.
ಕಳೆದ 6 ತಿಂಗಳಿನಿಂದ ಪತಿಯಿಂದ ಮುನ್ನಿ ದೂರವಾಗಿದ್ದರು. ಮೊಹಮ್ಮದ್ ಶೇಖ್ ಎಂಬಾತನ ಜೊತೆಗೆ ಮುನ್ನಿ ಸ್ನೇಹ ಬೆಳೆಸಿದ್ದರು. ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರೂ ಮುನ್ನಿ ಮತ್ತೊಬ್ಬನ ಜೊತೆಗೆ ಸ್ನೇಹ ಬೆಳಸಿದ್ದರು.
ಕೆಲ ದಿನಗಳ ಹಿಂದೆ ಮೊಹಮ್ಮದ್ ಶೇಖ್ ಹಾಗೂ ಮುನ್ನಿ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಮುನ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಸಂಬಂಧಿಕರು ಆರೋಪವಾಗಿದೆ. ಈ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಹೊಸ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ








