ಧಾರವಾಡ: ರಾಜ್ಯದಲ್ಲೊಂದು ಶಾಲಾ ಮಕ್ಕಳ ಪೋಷಕರು ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಇಬ್ಬರು ಮಕ್ಕಳನ್ನು ಅಪಹರಣ ಮಾಡಿರುವಂತ ಶಂಕೆ ವ್ಯಕ್ತವಾಗಿದೆ.
ಧಾರವಾಡದ ಕಮಲಾಪುರ ಬಡಾವಣೆಯಲ್ಲಿ ಮಕ್ಕಳಿಬ್ಬರನ್ನು ಅಪಹರಣ ಮಾಡಿರುವಂತ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಇಬ್ಬರು ಮಕ್ಕಳನ್ನು ಅಪಹರಣ ಮಾಡಿರೋದಾಗಿ ಹೇಳಲಾಗುತ್ತಿದೆ.
3ನೇ ತರಗತಿಯ ತನ್ವೀರ್(9) ಹಾಗೂ ಲಕ್ಷ್ಮೀ ಕರಿಯಪ್ಪನವರ್(9) ಅಪಹರಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಬೈಕ್ ಮೇಲೆ ಕೂರಿಸಿಕೊಂಡು ವ್ಯಕ್ತಿ ಪರಾರಿಯಾಗಿರೋ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಇದಾಗಿದೆ.
ಶಿಖರ್ ಧವನ್ ತಮ್ಮ ಬಹುಕಾಲದ ಗೆಳತಿ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ | Shikhar Dhawan








