ಬೀದರ್ : ಸಾವು ಅನ್ನೋದು ಯಾವ ಸಮಯದಲ್ಲಿ ಹೇಗೆ ಬರುತ್ತೆ ಅಂತ ಹೇಳುವುದಕ್ಕೆ ಆಗಲ್ಲ ಆದರೆ ಬೀದರ್ನಲ್ಲಿ ಮನಕಲಕುವ ಒಂದು ಘಟನೆ ನಡೆದಿದ್ದು ಪತ್ನಿ ಸಾವನಪ್ಪಿದ 3 ಗಂಟೆಯ ಬಳಿಕ ಪತಿ ಸಹ ಸಾವನಪ್ಪಿದ್ದು ಇಬ್ಬರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಡೆದಿದೆ.
ಹೌದು ಗ್ರಾಮದ ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ಸಾವಿನಲ್ಲೂ ಒಂದಾದ ದಂಪತಿ ಎಂದು ತಿಳಿದುಬಂದಿದೆ. ಆರೇಳು ದಶಕ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿ ಒಂದೇ ದಿನ ಸಾವಿಗೀಡಾದ ಘಟನೆಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರಿದ್ದಾರೆ. ಸ್ವಗ್ರಾಮದ ಹೊಲದಲಿ ದಂಪತಿಗಳಿಬ್ಬರನ್ನು ಅಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದಂಪತಿಗಳಿಬ್ಬರು ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊದಲು ಲಕ್ಷ್ಮೀಬಾಯಿ ಹೋಡಗೆ ಅವರು ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಸಾವಿನ ಸುದ್ದಿ ವಿಷಯ ತಿಳಿದು ಮೂರು ಗಂಟೆ ನಂತರ ಗುಂಡಪ್ಪ ಹೋಡಗೆ ಸಹ ಕೊನೆಯುಸಿರೆಳೆದಿದ್ದಾರೆ.








