ಪಾಟ್ನ: ದೇಶದಲ್ಲೇ ಬೆಚ್ಚಿ ಬೀಳಿಸು ಕೃತ್ಯ ಎನ್ನುವಂತೆ ಆಸ್ಪತ್ರೆ ವಾರ್ಡ್ ಗೆ ನುಗ್ಗಿ ಗ್ಯಾಂಗ್ ಸ್ಟರ್ ನನ್ನು ಭೀಕರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವಂತ ಘಟನೆ ಪಾಟ್ನಾದಲ್ಲಿ ನಡೆದಿದೆ.
ಗನ್ ಹಿಡಿದು ಆಸ್ಪತ್ರೆಯ ಐಸಿಯು ವಾರ್ಡ್ ಒಳಗೆ ನುಗ್ಗಿದಂತ ಹಂತಕರು, ಅಲ್ಲಿದ್ದಂತ ಗ್ಯಾಂಗ್ ಸ್ಟರ್ ಒಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿರುವಂತ ಘಟನೆ ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ನಡೆದಿದೆ.
ಪಾಟ್ನಾದಾ ಪರಾಸ್ ಆಸ್ಪತ್ರೆಯ ವಾರ್ಡ್ ನಂ 209ರಲ್ಲಿ ಗ್ಯಾಂಗ್ ಸ್ಟರ್ ಆಗಿದ್ದಂತ ಚಂದನ್ ಮಿಶ್ರಾ ಎಂಬಾತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಆಸ್ಪತ್ರೆಗೆ ಗನ್ ಹಿಡಿದು ಎಂಟ್ರಿ ಕೊಟ್ಟಂತ ಐವರು ಹಂತಕರು, ಗ್ಯಾಂಗ್ ಸ್ಟರ್ ಚಂದನ್ ಮಿಶ್ರ ಮೇಲೆ ಗುಂಡು ಹಾರಿಸಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಬಿಹಾರದ ಪಾಟ್ನಾದಲ್ಲಿನ ಪರಾಸ್ ಆಸ್ಪತ್ರೆಯಲ್ಲಿ ಮರ್ಡರ್ ಕೇಸಲ್ಲಿ ಜೈಲುಪಾಲಾಗಿದ್ದಂತ ಚಂದನ್ ಮಿಶ್ರಾ ಚಿಕಿತ್ಸೆ ಪಡೆಯುತ್ತಿದ್ದರು. ಪೆರೋಲ್ ಪಡೆದು ಚಂದನ್ ಮಿಶ್ರಾ ಚಿಕಿತ್ಸೆ ಪಡೆಯುತ್ತಿದ್ದಂತ ವಿಷಯ ತಿಳಿದು ಐವರು ಹಂತಕರು ಆಸ್ಪತ್ರೆಗೆ ನುಗ್ಗಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ಎಲ್ಲಾ ದೃಶ್ಯ ಆಸ್ಪತ್ರೆಯಲ್ಲಿದ್ದಂತ ಸಿಸಿಟಿವಿಯಲ್ಲಿ ದಾಖಲಾಗಿದೆ.
Shocker from Patna, Bihar:
CCTV footage shows 4 armed men storming an ICU ward at Paras Hospital and murdering a patient. What's happening? pic.twitter.com/Iv77fYd21d— Asawari Jindal (@AsawariJindal15) July 17, 2025