ಹಾಸನ: ವರ್ಷಕ್ಕೆ ಒಮ್ಮೆ ಹಾಸನಾಂಬೆ ದರ್ಶನ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ದೇವಿಯ ದರ್ಶನ ಪಡೆಯಲು ಭಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
BIGG NEWS: ಹಾವೇರಿಯ ಕೋಳೂರಿನಲ್ಲಿ ಮಳೆಗೆ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಹಿಂಭಾಗ ಗೋಡೆ ಕುಸಿತ
ಇಂದು ಬೆಳಿಗ್ಗೆಯಿಂದಲೂ ಕೂಡ ನೂಕು ನುಗ್ಗಲಿನ ನಡುವೆ ದರ್ಶನ ಪಡೆಯಲು ಭಕ್ತರು ಪರದಾಡಿದ್ದಾರೆ. ಇನ್ನು ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಸಚಿವರುಗಳ ದರ್ಶನದಿಂದ ಸಾಮಾನ್ಯ ಜನರು ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿ ಧಿಕ್ಕಾರ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನು ಎರಡು ದಿನಗಳಿಂದ ಶಾಸಕ ಪ್ರೀತಂಗೌಡ ಗರ್ಭಗುಡಿ ಬಾಗಿಲ ಬಳಿ ನಿಂತ್ತುಕೊಂಡಿದ್ದು, ಕೆಲವರಿಗೆ ಎಂಟ್ರಿ, ಕೆಲವರಿಗೆ ನೋ ಎಂಟ್ರಿ ಎನ್ನುತ್ತಿದ್ದಾರೆ. ಶಾಸಕರ ಈ ನಡೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೇವಲ ಐದು ದಿನಗಳು ಮಾತ್ರ ದರ್ಶನಕ್ಕೆ ಬಾಕಿ ಇರೋ ವೇಳೆ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.