ಬೆಂಗಳೂರು: ನಗರದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದ ಬಳಿಯಲ್ಲಿಯೇ ಗನ್ ಹಿಡಿದುಕೊಂಡು ರಸ್ತೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ರಂಪಾಟ ನಡೆಸಿದಂತ ವೀಡಿಯೋ ವೈರಲ್ ಆಗಿದೆ.
ಹೌದು ಬೆಂಗಳೂರಲ್ಲಿ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿಯ ರಂಪಾಟ ನಡೆಸಿದ್ದಾರೆ. ಗೃಹ ಸಚಿವರ ಪರಮೇಶ್ವರ್ ನಿವಾಸದ ಬಳಿ ಅಪಾರ್ಟ್ ಮೆಂಟ್ ನಿರ್ಮಾಣದ ಬಳಿಯಲ್ಲಿ ಈ ಘಟನೆ ನಡೆದಿದೆ.
ಗ್ರಾನೈಟ್‌ಗಳನ್ನ ಕಂಟೈನರ್ ಲಾರಿಯೊಂದು ತಂದಿತ್ತು. ಮನೆಗಳ ಮುಂದೆ ಕಾರುಗಳು ನಿಂತಿದ್ದ ಹಿನ್ನೆಲೆಯಲ್ಲಿ ನಿಧಾನವಾಗಿ ಸಾಗುತ್ತಿತ್ತು. ಈ ವೇಳೆ ಏಕಾಏಕಿ ಮನೆಯಿಂದ ಹೊರಗೆ ಬಂದಂತ ನಿವೃತ್ತ ಪೊಲೀಸ್ ಅಧಿಕಾರಿ ಈ ರೀತಿ ರಂಪಾಟ ಮಾಡಿದ್ದಾರೆ.
ಬಂದೂಕು ಹಿಡಿದು ಬಂದ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಅವರು ಚಾಲಕನಿಗೆ ಗನ್ ತೋರಿಸಿ ಫುಲ್ ಅವಾಜ್ ಹಾಕಿದ್ದಾರೆ.
ವೈರಲ್ ಆಗಿರುವಂತ ವೀಡಿಯೋದಲ್ಲಿ ಇಲ್ಲಿ ಏಕೆ ಬಂದೆ ಮಗನೇ…? ಇಪ್ಪತ್ತು ವರ್ಷದಿಂದ ಕಟ್ಟುತ್ತಲೇ ಇದ್ದಾರೆ. ನಡಿಯೋ ಇಲ್ಲಿಂದ ಎಂದು ಲಾರಿಯನ್ನು ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಮುಂದೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ ವರ್ಕ್ ನಡೆಯುತ್ತಿದೆ. ಗ್ರಾನೈಟ್ ಅನ್‌ಲೋಡ್ ಮಾಡಬೇಕು ಸರ್ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ. ಆಗ ಕಟ್ಟಡ ಕಾರ್ಮಿಕರಿಗೂ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಬಿಡಿಸಲು ಬಂದ ತಮ್ಮ ಕುಟುಂಬಸ್ಥರ ವಿರುದ್ದವೂ ಗರಂ ಆಗಿದ್ದಾರೆ. ಜಯಪ್ರಕಾಶ್ ರಂಪಾಟ ಕಂಡು ನಾಗರೀಕರು ತಬ್ಬಿಬ್ಬಾದಂತ ಘಟನೆಯೂ ನಡೆಯಿತು.
BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ