ನವದೆಹಲಿ: ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Bengaluru Airport) ದ ನಿಲ್ದಾಣದ ಟರ್ಮಿನಲ್ -2 ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಉದ್ಘಾಟಿಸಲಿದ್ದಾರೆ.
ಮಾಡಿದ್ದು, ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗಲಿದೆ. ಟರ್ಮಿನಲ್ 2 ಉದ್ಘಾಟನೆಯಿಂದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಚೆಕ್-ಇನ್ ದ್ವಿಗುಣಗೊಳ್ಳುತ್ತವೆ ಇದು ಪ್ರಯಾಣಿಕರಿಗೆ ಸಹಾಯವಾಗಲಿದೆ
ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಅನುಭವವನ್ನು “ಉದ್ಯಾನವನದಲ್ಲಿ ನಡಿಗೆ” ಎಂದು ಅರ್ಥೈಸಲಾಗಿದೆ. ಪ್ರಯಾಣಿಕರು 10,000+ ಚದರ ಮೀಟರ್ ಗಳಷ್ಟು ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸುತ್ತಾರೆ.
ಈ ಉದ್ಯಾನಗಳನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತ (India) ದಲ್ಲಿ ನಿರ್ಮಿಸಿದೆ. ಈ ವಿಮಾನ ನಿಲ್ದಾಣವು ನವೀಕರಿಸಬಹುದಾದ ಶಕ್ತಿಯ 100% ಬಳಕೆ ಮಾಡಿಕೊಂಡಿದೆ. ಹೊಸ ಟರ್ಮಿನಲ್ ಫೋಟೋಗಳು ಬಿಡುಗಡೆಯಾಗಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಕಂಗೊಳಿಸುತ್ತಿದೆ.