ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ದೊಡ್ಡ ಬೆಳವಣಿಗೆಯಾಗಿದ್ದು ಸಂಸದೀಯ ಸುಮಲತಾ ಅಂಬರೀಶ್ ಅವರು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು ಆದರೆ ಈ ಬಾರಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ.
ಅದಕ್ಕೂ ಮುಂಚೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪೂರಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೋ ಒಂದು ಒಳ್ಳೆಯ ಕಾರ್ಯ ಮಾಡುವಾಗ ಅವರ ಆಶೀರ್ವಾದ ಪಡೆದೆ ಮುಂದುವರಿಯುತ್ತೆನೆ. ಖಂಡಿತ ಇದಕ್ಕೆ ಅವರ ಆಶೀರ್ವಾದ ಇರುತ್ತೆ ಎಂದು ಅಂದುಕೊಂಡಿದ್ದೇನೆ.
‘ಬಿಜೆಪಿ ಸೇರಿಕೊಳ್ಳಿ ಅಥವಾ ಜೈಲು ಎದುರಿಸಿ’ ಎಂಬ ಹೇಳಿಕೆ: ದೆಹಲಿ ಸಚಿವೆ ಅತಿಶಿಗೆ ಚುನಾವಣಾ ಆಯೋಗ ನೋಟಿಸ್
ಮೊದಲೇ ಅಧಿಕೃತವಾಗಿ ಸೇರ್ಪಡೆಯಾಗುವಾಗ ಎಲ್ಲಾ ಸಿಗುತ್ತದೆ ಅದಾದಮೇಲೆ ಚುನಾವಣೆ ದಿನಾಂಕ ಯಾವ ರೀತಿ ಎಲ್ಲೆಲ್ಲಿ ಪ್ರಚಾರ ಮಾಡುವುದರ ಕುರಿತು ಪ್ಲಾನ್ ಮಾಡಿ ಚರ್ಚೆ ಮಾಡುವುದಾಗಿದೆ ಎಂದರು.ಎನ್ಡಿಎ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಂದಮೇಲೆ ಮಂಡ್ಯ ಮಾತ್ರ ಅಲ್ಲ ಅವರು ಎಲ್ಲೆಲ್ಲಿ ನನಗೆ ಹೋಗಬೇಕು ಅಂತ ಹೇಳುತ್ತಾರೆ ಅಲ್ಲಿ ಹೋಗುವಂತಹ ಅವಶ್ಯಕತೆ ಇರುತ್ತೆ.ಅದು ನನ್ನ ಕರ್ತವ್ಯ ಕೂಡ ಆಗಿದೆ ಹೀಗಾಗಿ ಮಂಡ್ಯ ಚುನಾವಣೆ ಅಂತ ಅಲ್ಲ ಎಲ್ಲಾ ಕಡೆಗೂ 28 ಕ್ಷೇತ್ರಗಳಲ್ಲಿ ಕೂಡ ಗೆಲ್ಲಬೇಕು ಅಂತ ಗುರಿ ಇಟ್ಟುಕೊಲಾಗಿದೆ.
ಮಂಡ್ಯ ಜಿಲ್ಲೆಯ ನನ್ನ ಬೆಂಬಲಿಗರು ಮುಖಂಡರು ಅವರೇ ಎಲ್ಲ ನನಗೆ ಹೈಕಮಾಂಡ್. ಅಂಬರೀಶ್ ಅವರ ಜೊತೆಯಲ್ಲಿ ಯಾರಿದ್ದರೂ ಅವರು ಕೂಡ ಈಗ ನನ್ನ ಜೊತೆಯಲ್ಲಿ ಇದ್ದರೆ ಮುಂದಕ್ಕೂ ಕೂಡ ಅವರ ಜೊತೆ ಇರುತ್ತಾರೆ ಎಂದು ನಂಬಿದ್ದೇನೆ. ಆಟಕ್ಕೆ ನಿಂದು ಸಾಧಿಸುವುದಕ್ಕಿಂತ ನಮ್ಮ ದೇಶಕ್ಕೆ ಯಾವ ಸರ್ಕಾರ ಬೇಕಾಗಿದೆ ಯಾರ ನೇತೃತ್ವ ಬೇಕಾಗಿದೆ ಅದನ್ನು ನಾನು ಯೋಚನೆ ಮಾಡಿದ್ದೇನೆ ಕೇವಲ ನನ್ನ ಬಗ್ಗೆ ಯೋಚನೆ ಮಾಡಿದರೆ ಸಾಕಷ್ಟು ಅವಕಾಶಗಳಿತ್ತು ನಾನದನ್ನ ಆಯ್ಕೆ ಮಾಡಲಿಲ್ಲ ನನ್ನ ಆಯ್ಕೆಗಳು ನಿಮಗೆ ವಿಭಿನ್ನ ಅನ್ನಿಸಬಹುದು ಆದರೆ ನಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ತಿಳಿಸಿದರು.