ತಮಿಳುನಾಡು : ಪಟ್ಟಿವೀರನಪಟ್ಟಿ ಬಳಿ ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್‌ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದು ಅಯ್ಯಪ್ಪ ಭಕ್ತರೊಬ್ಬರು ಮೃತಪಟ್ಟು ಇಬ್ಬರಿಗೆ ಗಾಯವಾಗಿರುವ ಘಟನೆ ತಮಿಳುನಾಡಿನ ದಿಂಡುಗಲ್ ಎಂಬಲ್ಲಿ ನಡೆದಿದೆ.
ಸುಂದರರಾಜಪುರಂ ಪೆಟ್ರೋಲ್ ಪಂಪ್ ಹತ್ತಿರ, ಪಟ್ಟಿವೀರನ್ಪಟ್ಟಿ ಪಕ್ಕ, ದಿಂಡುಗಲ್ ಜಿಲ್ಲೆಯಲ್ಲಿ ಶಬರಿಮಲೆ ದರ್ಶನ ಮುಗಿಸಿ ಕರ್ನಾಟಕಕ್ಕೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ವ್ಯಾನ್‌ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಅಯ್ಯಪ್ಪ ಭಕ್ತರು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ವಟ್ಟಲಕುಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






