ಚುರು (ರಾಜಸ್ಥಾನ): ಇಲ್ಲಿನ ಸಿದ್ಧಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಅಕ್ರಮ ಮದ್ಯವನ್ನು ಮಾರಾಟ ಮಾಡದಂತೆ ಹೇಳಿದಕ್ಕೆ 34 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ, ಆತನ ಖಾಸಗಿ ಭಾಗಕ್ಕೆ ಬರೆ ಹಾಕಿ ದುಷ್ಕೃತ್ಯ ಮೆರೆದಿರುವ ಘಟನೆ ನಡೆದಿದೆ.
ಗ್ರಾಮದ ಧಾರ್ಮಿಕ ಸ್ಥಳದ ಬಳಿ ಕೆಲವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಈ ವ್ಯಕ್ತಿ ಮದ್ಯ ಮಾರಾಟ ಮಾಡದಂತೆ ತಿಳಿಸಿದ್ದಾರೆ. ಇದರಿಂದ ಕೋಪಗಂಡ ಅವರು ವ್ಯಕ್ತಿಗೆ ಥಳಿಸಿದ್ದಲ್ಲದೇ, ಅವನನ್ನು ವಿವಸ್ತ್ರಗೊಳಿಸಿ, ಆತನ ಖಾಸಗಿ ಭಾಗಕ್ಕೆ ಬರೆ ಹಾಕಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಿದರು. ಇದೀಗ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆ ಬಯಲಿಗೆ ಬಂದ ಬಳಿಕವೂ ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ದೂರವಾಗಿದ್ದಾರೆ. ಘಟನೆಯ ನಂತರ ಹೆದರಿದ ವ್ಯಕ್ತಿ ಕುಟುಂಬ ಸಮೇತ ಇಲ್ಲಿಂದ ದೂರ ಹೋಗುವುದಾಗಿ ಹೇಳಿದ್ದಾನೆ. ಆರೋಪಿಗಳು ನನ್ನನ್ನುಇಲ್ಲಿ ಬದುಕಲು ಬಿಡುವುದಿಲ್ಲ ನಾನು ನನ್ನ ಕುಟುಂಬದ ಸಮೇತ ಬೇರೆಡೆಗೆ ಹೋಗುತ್ತೇನೆ ಎಂದು ತಿಳಿಸಿದ್ದಾನೆ.
ಸಂತ್ರಸ್ತನ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ‘ದ್ರೌಪತಿ ಮುರ್ಮು’ ಪ್ರಮಾಣ ವಚನ ಸ್ವೀಕಾರ | Draupadi Murmu
Karnataka Rain: ಇಂದು, ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಜು.28ರಂದು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಚಾಲನೆ