ಬಾಗಲಕೋಟೆ: ರಾಜ್ಯದಲ್ಲಿ ಮತ್ತೊಂದು ಕೀಚಕ ಕೃತ್ಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕನೇ ಅತ್ಯಾಚಾರ ಎಸಗಿದ್ದಾನೆ. ಈ ಪೈಶಾಚಿಕ ಕೃತ್ಯದಿಂದಾಗಿ ಅಪ್ರಾಪ್ತ ಬಾಲಕಿ 2 ತಿಂಗಳ ಗರ್ಭಿಣಿಯಾಗುವಂತೆ ಆಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 7ನೇ ತರಗತಿ ಓದುತ್ತಿರುವ ಅಪ್ರಾಪ್ತೆಯ ಮೇಲೆ 8ನೇ ತರಗತಿ ಓದುತ್ತಿರುವಂತ ಅಪ್ರಾಪ್ತ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ.
ಅಪ್ರಾಪ್ತ ಬಾಲಕಿ, ಅಪ್ರಾಪ್ತ ಬಾಲಕ ಇಬ್ಬರೂ ವಸತಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಅಪ್ರಾಪ್ತೆಯ ತಂದೆ ಪೊಲೀಸರಿಗೆ ಅಪ್ರಾಪ್ತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಇಳಕಲ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 75,000 ದಂಡ
ಹೊಸ ಆದಾಯ ತೆರಿಗೆ ನಿಯಮ : ITR ಸಲ್ಲಿಸುವ ಗಡುವು ಮತ್ತೊಮ್ಮೆ ವಿಸ್ತರಣೆ | ITR filing due date extended