ಬೆಂಗಳೂರು : ಸಿಗರೇಟ್ ಸೇವನೆ ಮಾಡುತ್ತಾ ಬೈಕ್ ಚಲಾಯಿಸಿ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸ್ಯಾಂಕಿಕೆರೆಯ ಟಿ.ಚೌಡಯ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು. ಮೃತರನ್ನು ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಪ್ರಶಾಂತ್ ನಾಯ್ಕ್(27) ಎಂದು ಗುರುತಿಸಲಾಗಿದೆ.
ಸಿಗರೇಟ್ ಸೇವನೆ ಮಾಡುತ್ತಾ ಬೈಲ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ಫುಟ್ ಬಾತ್ ಉಜ್ಜಿಕೊಂಡು ಬಿದ್ದಿದೆ. ಪರಿಣಾಮ ಪ್ರಶಾಂತ್ ತಲೆಗೆ ಪೆಟ್ಟಾಗಿತ್ತು. ಈ ಹಿನ್ನೆಲೆ ಅವರು ಮೃತಪಟ್ಟಿದ್ದಾರೆ. ಸದಾಶಿವನಗರದಿಂದ ತಮ್ಮ ನಿವಾಸಕ್ಕೆ ತೆರಳುವ ವೇಳೆ ಅವಘಡ ಸಂಭವಿಸಿದೆ. ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS: ಸುರತ್ಕಲ್ನಲ್ಲಿ ಜಲೀಲ್ ಹತ್ಯೆ ಪ್ರಕರಣ; ನಿಷೇದಾಜ್ಞೆ ಡಿ. 29ರವರೆಗೆ ವಿಸ್ತರಣೆ
BREAKING NEWS : ಪ್ರಧಾನಿ ಮೋದಿ ‘ಸಹೋದರ’ ಕಾರು ಅಪಘಾತ, ಪುತ್ರ & ಸೊಸೆಗೆ ಗಂಭೀರ ಗಾಯ |Accident