Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ರಂಜಿತ್‌ಗೆ ಜಾಮೀನು ಮಂಜೂರು | Filmmaker Ranjith

10/04/2026 3:24 PM

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

10/04/2026 3:22 PM

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

10/04/2026 3:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!
KARNATAKA

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

By kannadanewsnow0910/04/2026 3:22 PM

ಹೊಸನಗರ: ಲೋಕಕ್ಕೆ ಆತ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ಇರಬಹುದು. ಆದರೆ ನಿನ್ನೆ ಸಂಜೆ ಹುಲಿಕಲ್ ಘಾಟಿಯ ಆ ಹೇರ್-ಪಿನ್ ತಿರುವಿನಲ್ಲಿ ನಡೆದ ಆ ಘಟನೆ, ಆತ ಕೇವಲ ಕಾರ್ಮಿಕನಲ್ಲ, ಸಾಕ್ಷಾತ್ ದೈವಸ್ವರೂಪಿ ಎಂಬುದನ್ನು ಸಾಬೀತುಪಡಿಸಿದೆ. ತನ್ನ ಪ್ರಾಣ ಹೋಗುತ್ತದೆ ಎಂದು ಗೊತ್ತಿದ್ದರೂ, ತನ್ನವರ ನೆನಪು ಕಾಡುತ್ತಿದ್ದರೂ, ಸಹೋದ್ಯೋಗಿಗಳ ಪ್ರಾಣ ಉಳಿಸಿ ವೀರಮರಣವಪ್ಪಿದ ಚಕ್ಕಾರಿನ ರಾಘವೇಂದ್ರ (40) ಅವರ ಕಥೆ ಕೇಳಿದರೆ ಕಲ್ಲು ಮನಸ್ಸು ಕೂಡ ಕರಗುತ್ತದೆ.

ಕನಸುಗಳು ನೂರಾರು.. ಕಾಲ ಮಿತವಾಗಿತ್ತು

ರಾಘವೇಂದ್ರ ಅವರ ಬದುಕಿನಲ್ಲಿ ಸಂತಸದ ಕ್ಷಣಗಳು ಶುರುವಾಗಿದ್ದೇ ಈಚೆಗೆ. ಕೇವಲ 18 ದಿನಗಳ ಹಿಂದಷ್ಟೇ ಅವರಿಗೆ ಗಂಡು ಮಗು ಜನಿಸಿತ್ತು. ಮಗನನ್ನು ಎತ್ತಿ ಮುದ್ದಾಡಬೇಕು, ಆ ಪುಟ್ಟ ಕಂದ ತನ್ನನ್ನು ‘ಅಪ್ಪ’ ಎಂದು ಕರೆಯುವ ದಿನವನ್ನು ನೋಡಬೇಕು ಎಂಬ ಸಾವಿರಾರು ಕನಸುಗಳು ಆ ತಂದೆಯ ಕಣ್ಣಲ್ಲಿದ್ದವು. ಆದರೆ ಆ ಹಸುಳೆಯೊಂದಿಗೆ ಆಡುವ ಅದೃಷ್ಟಕ್ಕಿಂತ, ಪರರ ಪ್ರಾಣ ಉಳಿಸುವ ಜವಾಬ್ದಾರಿಯೇ ಅವರಿಗೆ ದೊಡ್ಡದಾಗಿ ಕಂಡಿತು.

ಆ ಕರಾಳ ಸಂಜೆ ನಡೆದಿದ್ದೇನು?

ಸಂಜೆ 6:30ರ ಸುಮಾರಿಗೆ ಹುಲಿಕಲ್ ಘಾಟಿಯಲ್ಲಿ ತಡೆಗೋಡೆ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿತ್ತು. ಅನಿರೀಕ್ಷಿತವಾಗಿ ಬೆಟ್ಟದ ಧರೆ ಕುಸಿಯಲು ಆರಂಭಿಸಿತು. ಮಣ್ಣು ಮುನ್ನುಗ್ಗಿ ಬರುತ್ತಿರುವುದನ್ನು ಕಂಡ ರಾಘವೇಂದ್ರ ಅವರಿಗೆ ತಾನು ಇನ್ನು ಬದುಕುವುದಿಲ್ಲ ಎಂಬ ಸತ್ಯ ಕ್ಷಣಾರ್ಧದಲ್ಲಿ ಅರಿವಿಗೆ ಬಂದಿತ್ತು. ಅಂತಹ ಸಾವಿನ ಕ್ಷಣದಲ್ಲಿ ಯಾರು ತಾನೆ ಮೊದಲು ಓಡಿ ಬಚಾವಾಗಲು ಯತ್ನಿಸುವುದಿಲ್ಲ? ಆದರೆ ರಾಘವೇಂದ್ರ ಮಾಡಿದ್ದೇ ಬೇರೆ.

“ನನ್ನ ಜೀವ ಹೋದರೂ ಪರವಾಗಿಲ್ಲ, ಇವರು ಬದುಕಲಿ” ಎಂಬಂತೆ ತನ್ನ ಪಕ್ಕದಲ್ಲೇ ಮಣ್ಣಿನ ಅಡಿಗೆ ಸಿಲುಕುತ್ತಿದ್ದ ಇಬ್ಬರು ಕಾರ್ಮಿಕರನ್ನು ಶಕ್ತಿ ಮೀರಿ ಎಳೆದು ಹೊರಕ್ಕೆ ತಳ್ಳಿದರು. ಆ ಇಬ್ಬರು ಪ್ರಾಣಾಪಾಯದಿಂದ ಪಾರಾದರು, ಆದರೆ ಅಷ್ಟರಲ್ಲೇ ರಾಘವೇಂದ್ರ ಅವರ ಮೇಲೆ ಟನ್‌ಗಟ್ಟಲೆ ಮಣ್ಣು ಬಿದ್ದುಬಿಟ್ಟಿತ್ತು.

ಮಗುವಿಗಿಂತ ಮನುಷ್ಯತ್ವ ದೊಡ್ಡದಾಯಿತೇ?

ಸಾವಿನ ದವಡೆಯಲ್ಲಿದ್ದಾಗ ಯಾರಿಗಾದರೂ ತಮ್ಮ ಹೆಂಡತಿ, ಮಕ್ಕಳು ಮತ್ತು ಸಂಸಾರ ನೆನಪಿಗೆ ಬರುವುದು ಸಹಜ. ರಾಘವೇಂದ್ರ ಅವರಿಗೂ ಆ 18 ದಿನದ ಹಸುಳೆಯ ಮುಖ ಕಣ್ಣಮುಂದೆ ಬಂದಿರಬಹುದು. ಆದರೂ, ಎದುರಿಗಿದ್ದ ಜೀವಗಳನ್ನು ಉಳಿಸುವುದೇ ತನ್ನ ಧರ್ಮ ಎಂದು ಭಾವಿಸಿದ ಆ ನಿಸ್ವಾರ್ಥ ಜೀವ, ಸಾವನ್ನೇ ಅಪ್ಪಿಕೊಂಡಿತು.

ಅಗ್ನಿಶಾಮಕ ದಳದವರು ನಾಲ್ವರನ್ನು ರಕ್ಷಿಸಿದರಾದರೂ, ರಾಘವೇಂದ್ರ ಸೇರಿದಂತೆ ಮೂವರು ಮಣ್ಣಿನಡಿ ಉಸಿರು ಚೆಲ್ಲಿದ್ದರು. ಆ ಇಬ್ಬರು ಕಾರ್ಮಿಕರು ಇಂದು ಉಸಿರಾಡುತ್ತಿದ್ದಾರೆ ಎಂದರೆ ಅದಕ್ಕೆ ರಾಘವೇಂದ್ರ ನೀಡಿದ ‘ಪ್ರಾಣದಾನ’ವೇ ಕಾರಣ.

ಹೊಸನಗರದ ಚಕ್ಕಾರು ಗ್ರಾಮ ಇಂದು ಒಬ್ಬ ವೀರ ಪುತ್ರನನ್ನು ಕಳೆದುಕೊಂಡಿದೆ. ಆ ಪುಟ್ಟ ಮಗುವಿಗೆ ತನ್ನ ತಂದೆ ಯಾರು ಎಂಬುದು ತಿಳಿಯುವ ಮೊದಲೇ ವಿಧಿ ಆತನನ್ನು ಕಿತ್ತುಕೊಂಡಿದೆ. ಆದರೆ ದೊಡ್ಡವನಾದ ಮೇಲೆ ಆ ಮಗು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ- “ನನ್ನ ತಂದೆ ತನ್ನ ಪ್ರಾಣ ಕೊಟ್ಟು ಇಬ್ಬರ ಜೀವ ಉಳಿಸಿದ ಮಹಾಶೂರ” ಎಂದು.

ಮೃತ ಹುಲಿಕಲ್ ಹೀರೋ ರಾಘವೇಂದ್ರಗೆ ಇಬ್ಬರು ಹೆಣ್ಣುಮಕ್ಕಳು

ಅಂದಹಾಗೇ ಹುಲಿಕಲ್ ಘಾಟ್ ನಲ್ಲಿ ಮಣ್ಣು ಕುಸಿದಾಗ ಇಬ್ಬರು ಕಾರ್ಮಿಕರ ಜೀವ ಉಳಿಸಿ ತನ್ನ ಪ್ರಾಣ ತೆತ್ತ ರಾಘವೇಂದ್ರಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಪುತ್ರಿ ಮೂರು ವರ್ಷದವಳಾಗಿದ್ದರೇ, ಎರಡನೇಯ ಮಗು 18 ದಿನಗಳ ಹಸುಳೆಯಾಗಿದೆ.

ರಾಘವೇಂದ್ರ ಅವರ ಈ ಅಪ್ರತಿಮ ಸಾಹಸ ಮತ್ತು ನಿಸ್ವಾರ್ಥ ಮನೋಭಾವಕ್ಕೆ ಇಡೀ ನಾಡು ತಲೆಬಾಗುತ್ತದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆ ಪುಟ್ಟ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂಬುದಾಗಿ ನಾವು ನೀವೆಲ್ಲ ಪ್ರಾರ್ಥಿಸೋಣ…

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

Share. Facebook Twitter LinkedIn WhatsApp Email

Related Posts

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

10/04/2026 3:18 PM1 Min Read

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM2 Mins Read

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM2 Mins Read
Recent News

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ರಂಜಿತ್‌ಗೆ ಜಾಮೀನು ಮಂಜೂರು | Filmmaker Ranjith

10/04/2026 3:24 PM

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

10/04/2026 3:22 PM

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

10/04/2026 3:18 PM

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM
State News
KARNATAKA

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

By kannadanewsnow0910/04/2026 3:22 PM KARNATAKA 2 Mins Read

ಹೊಸನಗರ: ಲೋಕಕ್ಕೆ ಆತ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ಇರಬಹುದು. ಆದರೆ ನಿನ್ನೆ ಸಂಜೆ ಹುಲಿಕಲ್ ಘಾಟಿಯ ಆ ಹೇರ್-ಪಿನ್…

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

10/04/2026 3:18 PM

ಬೆಂಗಳೂರಿನಲ್ಲಿ ‘ಜಾಂಬಿ ಡ್ರಗ್’ ಆತಂಕ – ವೈರಲ್ ವಿಡಿಯೋದ ಹಿಂದಿರುವ ಅಸಲಿ ಸತ್ಯವೇನು? ಇಲ್ಲಿದೆ ಓದಿ

10/04/2026 3:09 PM

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.